ಗ್ರಾಮೀಣ ಜನರಿಗೆ ಆರೋಗ್ಯ ಕಾಳಜಿ ಅರಿವು ಮುಖ್ಯ

ಗ್ರಾಮೀಣ ಜನರಿಗೆ ಆರೋಗ್ಯ ಕಾಳಜಿ ಅರಿವು ಮುಖ್ಯ

ಡಾ.ಟಿ.ಜಿ. ರವಿಕುಮಾರ್‌

ದಾವಣಗೆರೆ, ಜೂ.19- ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಕಾಳಜಿ ಇಲ್ಲದ ಕಾರಣ ಬಿಪಿ, ಶುಗರ್‌ ಕಾಯಿಲೆಯಿಂದ ತೊಂದರೆ ಎದುರಿಸುತ್ತಿದ್ದಾರೆ ಎಂದು ಡಾ.ಟಿ.ಜಿ. ರವಿಕುಮಾರ್‌ ಆತಂಕ ಪಟ್ಟರು.

ರೋಟರಿ ಸಂಸ್ಥೆಯಿಂದ ತಾಲ್ಲೂಕಿನ ಅತ್ತಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ನಮ್ಮ ಮೂಲಭೂತ ಹಕ್ಕು. ಅದನ್ನು ಎಲ್ಲರೂ ಪಡೆದುಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ 2 ಅಥವಾ 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಅತ್ತಿಗೆರೆ ಗ್ರಾ.ಪಂ. ವ್ಯಾಪ್ತಿಯ ಸುತ್ತ-ಮುತ್ತಲಿನ ಹಳ್ಳಿಯ 500ಕ್ಕೂ ಅಧಿಕ ಸಾರ್ವಜನಿಕರು ಹಾಗೂ 300ಕ್ಕೂ ಅಧಿಕ ಶಾಲಾ ಮಕ್ಕಳು ಶಿಬಿರದ ಪ್ರಯೋಜನ ಪಡೆದರು.

ವಿನಾಯಕ ಮೆಡಿಕಲ್ಸ್‌ ಅವರು ದೇಣಿಗೆಯಾಗಿ ಶಿಬಿರದಲ್ಲಿ 75 ಸಾವಿರ ರೂ.ಗಳ ಮೌಲ್ಯದ ಔಷಧಿಗಳನ್ನು ವಿತರಿಸಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಟೂಥ್ ಬ್ರಷ್‌ ನೀಡಲಾಯಿತು.

ಈ ವೇಳೆ ಟ್ರಸ್ಟಿನ ಗೌರವಾಧ್ಯಕ್ಷ ಗುರುಸಿದ್ದನಗೌಡ್ರು, ಡಾ.ಡಿ. ನಾಗರಾಜ್, ಕೆ.ಓ. ಮಹೇಶ್, ಲತಾ ಮಂಜುನಾಥ್, ಬಿ.ಸಿ. ಕಲ್ಲೇಶ್, ಎಚ್.ಕೆ. ಕಲ್ಲಪ್ಪ, ಇನ್ನರ್ ವ್ಹೀಲ್ ಸಂಸ್ಥೆಯ ಮಂಜುಳಾ ಕರ್ಜಗಿ, ಎಂ.ಕೆ. ಶೋಭಾ ಇದ್ದರು. ಇನ್ನರ್ ವ್ಹೀಲ್ ಸಂಸ್ಥೆ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಹೂವಿನಹಡಗಲಿಯ ಆರೋಗ್ಯ ಧಾಮದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

error: Content is protected !!