ವಿಶ್ವ ಯೋಗ ದಿನ : ಯಶಸ್ವಿಯಾದ ಯೋಗ ಶಿಬಿರ

ವಿಶ್ವ ಯೋಗ ದಿನ : ಯಶಸ್ವಿಯಾದ ಯೋಗ ಶಿಬಿರ

ದಾವಣಗೆರೆ, ಜೂ.19- ಜಿಲ್ಲಾಡಳಿತ, ಜಿಲ್ಲಾ ಆಯುಷ್‌ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ಇವರ ಸಹಯೋಗದಲ್ಲಿ ನಗರದ ಶಿವಯೋಗಿ ಮಂದಿರದಲ್ಲಿ ಮಂಗಳವಾರ 10ನೇ ಅಂತರ ರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಉಚಿತ ವಾಗಿ ಯೋಗ ತರಬೇತಿ ಶಿಬಿರ ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಅವರು ಆಯುಷ್‌ ಇಲಾಖೆಯ ಜತೆ ಕಳೆದ 10 ವರ್ಷಗಳಿಂದಲೂ ಅಂತರರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದ್ದು, ಈ ವರ್ಷವೂ 10ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಆಯುಷ್‌ ಪದ್ದತಿಯ ಉಪಯೋಗ ಹಾಗೂ ಯೋಗದಿಂದಾಗುವ ಪ್ರಯೋಜನವನ್ನು ಸಾರ್ವಜನಿಕರಿಗೆ ವಿವರಿಸಿದರು.

ಶ್ರೀ ಬಸವ ಪ್ರಭು ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ, ಯೋಗದ ಮಹತ್ವ ತಿಳಿಸಿದರು. 

ಯೋಗಪಟು ಚನ್ನಬಸವಣ್ಣ ಯೋಗ ಪ್ರಾತ್ಯಕ್ಷಿತೆ ನೆರವೇರಿಸಿದರು. 600ಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿದ್ದರು.

ಯೋಗ ಒಕ್ಕೂಟದ ಪದಾಧಿಕಾರಿ ಪರಶುರಾಮ್, ಕೀರ್ತಿರಾಜು, ಪ್ರಕಾಶ್ ಉತ್ತಂಗಿ, ಮಾದೇಗೌಡ್ರು, ಅನಿಲ್ ರಾಯ್ಕರ್ ಹಾಗೂ ಇತರರಿದ್ದರು.

error: Content is protected !!