ಬಿ.ಎ. ಕೊಟ್ರೇಶ್ ಅವರಿಗೆ ಪಿಹೆಚ್‌ಡಿ ಪದವಿ

ಬಿ.ಎ. ಕೊಟ್ರೇಶ್ ಅವರಿಗೆ ಪಿಹೆಚ್‌ಡಿ ಪದವಿ

ದಾವಣಗೆರೆ, ಜೂ.17- ದಾವಣಗೆರೆ ಮೂಲದ ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕ ಬಿ.ಎ. ಕೊಟ್ರೇಶ್ ಅವರು ಡಾ. ಎಂ. ವಿ. ಜಯರೇವಣ್ಣ ಅವರ ಮಾರ್ಗದರ್ಶನದಲ್ಲಿ 2023 – 24ನೇ ಸಾಲಿನಲ್ಲಿ ಮಂಡಿಸಿದ `ಸಂಸ್ಕೃತ ವಾಂಗ್ಮಯಂ ಪ್ರತಿ  ಜಿ.ವಿ. ಅಯ್ಯರ್ ಮಹೋದಯಸ್ಯ ಯೋಗದಾನಂ, ಏಕಮ್  ಅಧ್ಯಯನಂ’ ಎಂಬ ಸಂಸ್ಕೃತದ ಪ್ರೌಢ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಲಭಿಸಿದೆ.

ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬಿ.ಎ. ಕೊಟ್ರೇಶ್ ಅವರಿಗೆ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಂಸ್ಕೃತದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. 

ಸಮಾರಂಭದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ ಡಾ. ಹೆಚ್. ವಿ. ನಾಗರಾಜರಾವ್ ದೀಕ್ಷಾಂತ ಭಾಷಣ ಮಾಡಿದರು. 

ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್, ಉಪಕುಲಪತಿ ಡಾ. ಎಸ್. ಅಹಲ್ಯಾ ಮುಂತಾದವರು ಉಪಸ್ಥಿತರಿದ್ದರು.

ಕೊಟ್ರೇಶ್, ಶ್ರೀಮತಿ ಜಿ. ರೇಣುಕಮ್ಮ ಮತ್ತು ಬಿ.ಜಿ. ಅಜ್ಜಯ್ಯಸ್ವಾಮಿ ದಂಪತಿ ಪುತ್ರ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಮಲ್ಲಿಕಾರ್ಜುನ ಸ್ವಾಮಿ ಅವರ ಸಹೋದರ.

error: Content is protected !!