ಮೋದಿ ಮೂರನೇ ಬಾರಿಗೆ ಪ್ರಧಾನಿ ದೇವರಿಗೆ ಹರಕೆ ಸಲ್ಲಿಸಿದ ಅಭಿಮಾನಿ

ಮೋದಿ ಮೂರನೇ ಬಾರಿಗೆ ಪ್ರಧಾನಿ ದೇವರಿಗೆ ಹರಕೆ ಸಲ್ಲಿಸಿದ ಅಭಿಮಾನಿ

ಹರಪನಹಳ್ಳಿ, ಜೂ. 16 – ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿ ಎಂದು ದೇವರಿಗೆ ಹರಕೆ ಹೊತ್ತು ಅಭಿಮಾನ ಮೆರೆದಿದ್ದ ತಾಲ್ಲೂಕಿನ ಹಿರೇಮೇಗಳಗೆರೆ ಗ್ರಾಮದ ದಾನಪ್ಪರ್ ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಭಾನುವಾರ ಭೇಟಿ ನೀಡಿ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಈ ವೇಳೆ ಮಾತನಾಡಿದ ಕರುಣಾಕರ ರೆಡ್ಡಿ ಅವರು ಮಲ್ಲಿಕಾರ್ಜುನ ನಂತಹ ಕೋಟ್ಯಾಂತರ ಅಭಿಮಾನಿಗಳ ಆಶೀರ್ವಾದದಿಂದಾಗಿ ನರೇಂದ್ರ ಮೋದಿಯ ವರು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವೆಲ್ಲರೂ ಅವರಿಗೆ ಶಕ್ತಿ ತುಂಬೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡ ಆರ್. ಲೋಕೇಶ್, ಯಡಿಹಳ್ಳಿ ಶೇಖಪ್ಪ, ಎಂ. ಮಲ್ಲೇಶ, ಮಹೇಶ, ಮಂಜುನಾಥ್, ಪ್ರಕಾಶ, ಪರಶುರಾಮ, ರುದ್ರಪ್ಪ, ಅಶೋಕ, ಕರಿಬಸಪ್ಪ, ಸೇರಿದಂತೆ ಇತರರು ಇದ್ದರು.

error: Content is protected !!