ದಾವಣಗೆರೆ, ಜೂ. 16- ನಗರದ ಭಾವಸಾರ ವಿಷನ್ ಸಂಸ್ಥೆ ವತಿಯಿಂದ ಮೆಗಾ ರಕ್ತದಾನ ಶಿಬಿರ ನಡೆಸಲಾಯಿತು. ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೀತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಕ್ತದಾನಿಗಳಿಗೆ ವೈದ್ಯಾಧಿಕಾರಿ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಸರಳ ಅಮಟೆ, ಕಾರ್ಯದರ್ಶಿ ರಮೇಶಬಾಬು ಗುಜ್ಜರ್, ಮಾಜಿ ಗೌರ್ನರ್ ಹನುಮಂತರಾವ್ ಮಾಳದಕರ್, ಮಾಜಿ ಅಧ್ಯಕ್ಷ ಗಣೇಶ್ ವಾದೋನೆ, ವಿಜಯ್ ಕುಮಾರ ಟಿಕಾರೆ, ಪದಾಧಿಕಾರಿ ಗಳಾದ ದಯಾನಂದ ಮಹೇಂದ್ರಕರ್, ಶ್ರೀಮತಿ ಅನುಸೂಯಾ ಗುಜ್ಜರ್, ಸದಸ್ಯರಾದ ಮಂಜುನಾಥ್ ಗಡ್ಡಾಳೆ, ಡಾ. ಶಿಲ್ಪಾ ಹಿರಾಸ್ಕರ್ ಉಪಸ್ಥಿತರಿದ್ದರು.