ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ ಹರಿಹರ ನಗರಸಭಾ ಸದಸ್ಯರ ಮನವಿ

ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ  ಹರಿಹರ ನಗರಸಭಾ ಸದಸ್ಯರ ಮನವಿ

ಹರಿಹರ, ಜೂ.16-  ಇಲ್ಲಿನ ನಗರಸಭೆಯಿಂದ ತುರ್ತು ಕೆಲಸಗಳು ಮತ್ತು ಕಾಮಗಾರಿಗಳು ನಡೆಯದೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಕೂಡಲೇ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಕರೆಯುವಂತೆ,    ನಗರಸಭೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ನಗರಸಭೆ ಸದಸ್ಯರ ನಿಯೋಗವು ಮನವಿ ಸಲ್ಲಿಸಿತು.

ಕಳೆದ ವರ್ಷ ಅಕ್ಟೋಬರ್ 26 ರಂದು ಕೌನ್ಸಿಲ್ ಸಭೆ ನಡೆಸಲಾಗಿತ್ತು. ನಂತರ ಯಾವುದೇ ಸಭೆ ನಡೆದಿರುವುದಿಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಈ ನಿಯೋಗದಲ್ಲಿ ಸದಸ್ಯರಾದ ಶಂಕರ್ ಖಟಾವ್ಕರ್, ಕೆ.ಜಿ.ಸಿದ್ದೇಶ್, ಎಸ್.ಎಂ.ವಸಂತ್, ಬಾಬುಲಾಲ್, ಹನುಮಂತಪ್ಪ, ಸುಮಿತ್ರ ಮರಿದೇವ್, ಆರ್.ಸಿ. ಜಾವೀದ್, ರಜನಿಕಾಂತ್, ಮುಜಾಮಿಲ್‌ ಬಿಲ್ಲು ಮತ್ತು ದಾದಾ ಖಲಂದರ್ ಮುಖಂಡರಾದ ದಾದಾಪೀರ್ ಭಾನುವಳ್ಳಿ, ಮನ್ಸೂರ್ ಮದ್ದಿ ಮತ್ತಿತರರು ಇದ್ದರು.

error: Content is protected !!