ಸನ್ಮಾನಿತ ಮಕ್ಕಳು ನಾಡಿಗೆ ಹೆಸರು ತರಬೇಕು

ಸನ್ಮಾನಿತ ಮಕ್ಕಳು ನಾಡಿಗೆ ಹೆಸರು ತರಬೇಕು

ಶಾರದಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಕವಿ ಬಿ.ಆರ್.ಲಕ್ಷ್ಮಣ್ ರಾವ್

ದಾವಣಗೆರೆ, ಜೂ.16- ಪುರಸ್ಕಾರ ಪಡೆದ ಮಕ್ಕಳು ನಾಡು-ನುಡಿಗೆ ಗೌರವ ತರಬೇಕು ಎಂದು ಹಿರಿಯ ಕವಿ ಬಿ.ಆರ್‍. ಲಕ್ಷ್ಮಣ್‍ರಾವ್‍ ಹೇಳಿದರು.

ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ವತಿಯಿಂದ ನಗರದ ನರಹರಿ ಶೇಟ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮಾಜದ ಮಕ್ಕಳಿಗಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಾರದಾ ಪುರಸ್ಕಾರ-2024ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಸಾಧನೆ ಗುರುತಿಸಿ ಪ್ರೋತ್ಸಾಹಿಸುವರಿರಲಿಲ್ಲ. ಆದರೆ, ಈಗಿನ ಮಕ್ಕಳಿಗೆ ಈ ಭಾಗ್ಯ ಒದಗಿ ಬಂದಿದ್ದು, ಪ್ರತಿಭಾ ಪುರಸ್ಕಾರ ಮಕ್ಕಳ ಸಾಧನೆಗೆ ಸೂರ್ತಿ ನೀಡಲಿದೆ ಎಂದು ಹೇಳಿದರು.

ಪುರಸ್ಕಾರ ಪಡೆಯುತ್ತಿರುವವರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಾಗಿದ್ದು, ಮಹಿಳೆಯರು ಪುರುಷರಿಗಿಂತ ಮೇಲು ಗೈ ಸಾಧಿಸುತ್ತಿರುವುದು ಸಂತಸದ ಸಂಗತಿ ಎಂದರು.

ಚುಟುಕು ಸಾಹಿತಿ ಎಚ್. ಡುಂಡಿರಾಜ್ ಮಾತನಾಡಿ, ಮಕ್ಕಳಿಗೆ ಅಚ್ಚುಕಟ್ಟಾಗಿ ಪ್ರಶಸ್ತಿ ನೀಡುತ್ತಿರುವ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ಕಾರ್ಯ ಮಾದರಿಯಾಗಿದ್ದು, ಇದರಿಂದ ಎಲ್ಲಾ ಸಮಾಜಗಳ ಬಂಧುಗಳ ಪ್ರೇರಣೆ ಪಡೆದು ಅನುಕರಿಸಬೇಕು ಎಂದು ಹೇಳಿದರು.

ಪ್ರತಿ ವಿದ್ಯಾರ್ಥಿಯ ಹಿಂದೆ ಒಬ್ಬ ಗುರು ಮತ್ತು ಮುಂದೆ ನಿರ್ದಿಷ್ಟ ಗುರಿ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು. ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 125 ಮಕ್ಕಳಿಗೆ ಶಾರದಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕ ನಲ್ಲೂರು ಅರುಣಾಚಲ ಎನ್. ರೇವಣಕರ್, ಪ್ರತಿಷ್ಠಾನದ ಅಧ್ಯಕ್ಷೆ ಪ್ರೇಮಾ ಅರುಣಾಚಲ ಎನ್. ರೇವಣಕರ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ದಯಾನಂದ ಜಿ. ನೇತಲ್‌ಕರ್, ಸರಾಫ್ ಜ್ಯೂಯಲರ್ಸ್‍ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಸ್. ನಲ್ಲೂರು ರಾಜ್‌ಕುಮಾರ್ ಮತ್ತಿತರರಿದ್ದರು.

error: Content is protected !!