ಹೊನ್ನಾಳಿ ಡಿಪೋದಿಂದ 2 ಕೆಎಸ್ಆರ್‌ಟಿಸಿ ಬಸ್ಸು ಬಿಡುಗಡೆ

ಹೊನ್ನಾಳಿ ಡಿಪೋದಿಂದ 2 ಕೆಎಸ್ಆರ್‌ಟಿಸಿ ಬಸ್ಸು ಬಿಡುಗಡೆ

ಹೊನ್ನಾಳಿ, ಜೂ.14- ಹೊನ್ನಾಳಿ – ನ್ಯಾಮತಿ ಅವಳಿ ತಾಲ್ಲೂಕಿನ ಪ್ರಯಾಣಿಕರ ಅನುಕೂಲಕ್ಕಾಗಿ ಇಂದು ಎರಡು ಸರ್ಕಾರಿ ಬಸ್ಸುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಶಾಸಕ ಶಾಂತನಗೌಡರು ಹೇಳಿದರು. 

ಶಾಸಕರು ಹೊನ್ನಾಳಿ ಕೆಎಸ್ಆರ್‌ಟಿಸಿ ಡಿಪೋದಲ್ಲಿ ಬೆಳಗ್ಗೆ 8 ಗಂಟೆಗೆೆ ಚಾಲನೆ ಮಾಡುವ ಮೂಲಕ ನೂತನ ಬಸ್‌ಗಳಿಗೆ ಚಾಲನೆ ನೀಡಿದರು. 

ಹೊನ್ನಾಳಿ – ಕುಷ್ಟಗಿ – ಹೊಸಪೇಟೆ ಮಾರ್ಗವಾಗಿ ವಿಜಯಪುರಕ್ಕೆ ಮತ್ತು ಹೊನ್ನಾಳಿ – ನ್ಯಾಮತಿ – ಸವಳಂಗ ಮಾರ್ಗವಾಗಿ ಶಿವಮೊಗ್ಗಕ್ಕೆ ಇಂದು ಪ್ರತ್ಯೇಕ ಬಸ್‌ಗಳ ಚಾಲನೆ ನೀಡಿದ ಶಾಸಕರು, ಅಗತ್ಯ ಹಾಗೂ ಪ್ರಯಾಣಿಕರ ಬೇಡಿಕೆಗಳಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಬಸ್ಸುಗಳನ್ನು ಬಿಡಲಾಗುವುದೆಂದರು. 

ಡಿಪೋ ಮ್ಯಾನೇಜರ್ ಕೆ.ಮಹೇಶ್ವರಪ್ಪ, ಸಿಬ್ಬಂದಿಗಳಾದ ರಾಜು ಹಾರೊ ಬಿಡಿ, ಜಗದೀಶ್, ಕೆ.ಎಂ.ಪಿ.ಎಲ್ ಮಾಸ್ಟರ್, ಚಾಲಕರು, ನಿರ್ವಾಹಕರು, ಪ್ರಯಾಣಿಕರು ಇದ್ದರು.

ಹೊನ್ನಾಳಿಯಿಂದ ಪ್ರತಿ ದಿನ ನ್ಯಾಮತಿಗೆ ಕಾರ್ಯ ನಿಮಿತ್ತ ಪೋಸ್ಟ್ ಮಾಸ್ಟರ್ ವೀರೇಂದ್ರ ಸ್ವಾಮಿ ತೆರಳುವವರಾಗಿದ್ದು, ಇಂದು ಅವರು ನ್ಯಾಮತಿಗೆ ಮೊದಲ ಟಿಕೆಟ್ ಪಡೆದರು. 25ಕ್ಕೂ ಹೆಚ್ಚು ಪ್ರಯಾಣಿಕರು ಹೊನ್ನಾಳಿಯಿಂದ  ನ್ಯಾಮತಿ, ಸವಳಂಗ ಮಾರ್ಗವಾಗಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು.

error: Content is protected !!