ಕದಳಿಯಿಂದ ಮಹಿಳಾ ಆರೋಗ್ಯ ಜಾಗೃತಿ

ಕದಳಿಯಿಂದ ಮಹಿಳಾ ಆರೋಗ್ಯ ಜಾಗೃತಿ

ದಾವಣಗೆರೆ, ಜೂ. 13- ಪರಿವರ್ತನಾ ವೇದಿಕೆ, ವಿಹಾ,  ವನಿತಾ ವೈದ್ಯ ವೇದಿಕೆ, ಹಿಮೊಫಿಲಿಯಾ ಮಹಿಳಾ ಬಳಗ ಹಾಗೂ ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಹಿಮೊಫಿಲಿಯಾ ಸಭಾಂಗಣದಲ್ಲಿ ಹಿಮೊಫಿಲಿಯಾದ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗೌರವಾಧ್ಯಕ್ಷರಾದ ಕಿರುವಾಡಿ ಗಿರಿಜಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನೆ ಕೆಲಸದ ಹೆಣ್ಣು ಮಕ್ಕಳಿಗೆ ಮುಟ್ಟಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಮುಟ್ಟಿನ ಬಟ್ಟಲು (ಮೆನುಸ್ಟ್ರಿಯಲ್  ಕಪ್ಪು)ಗಳನ್ನು ವಿತರಿಸಲಾಯಿತು.

ಪರಿವರ್ತನಾ ವೇದಿಕೆಯ ಅಧ್ಯಕ್ಷರಾದ ಡಾ. ಶಾಂತಾಭಟ್ ಮಾತನಾಡಿ ಹೆಣ್ಣು ಮಕ್ಕಳಿಗೆ ಗರ್ಭಕೋಶದ ಆರೋಗ್ಯದ ಬಗ್ಗೆ ತಿಳಿಸಿದರು. ಡಾ. ಪೂರ್ಣಿಮಾ ಹಾಗೂ ಡಾ. ನಂದಿನಿ ಅವರು ಮುಟ್ಟಿನ ಬಟ್ಟಲುಗಳನ್ನು ಉಪಯೋಗಿಸುವ ವಿಧಾನ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಹಾ ವೇದಿಕೆಯ ಗೀತಾ ಬದ್ರಿನಾಥ್,  ಪರಿವರ್ತನಾ ವೇದಿಕೆಯ ಸುನಂದಾದೇವಿ, ನಯನ, ದೀಪ, ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಾಯತ್ರಿ ವಸ್ತ್ರದ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಮಮತಾ ನಾಗರಾಜ್ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.

error: Content is protected !!