ದಾವಣಗೆರೆ, ಜೂ. 12- ಮಾತೃ ದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 32ನೇ ವಾರ್ಡ್, ಜಯನಗರ, ಕರಿಯಮ್ಮ ದೇವಸ್ಥಾನದ ಹತ್ತಿರ ಇರುವ ಬೀದಿ ಬದಿ ತರಕಾರಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ ಮಾಡಲಾಯಿತು. ಫಲಾನುಭವಿಗಳು ಮಳೆಗಾಲ ಇರುವುದರಿಂದ ನೀವು ಕೊಟ್ಟ ಛತ್ರಿ ತುಂಬಾ ಸಹಾಯವಾಗಿರುತ್ತದೆ ಎಂದು ಮಾತೃದೇವೋ ಟ್ರಸ್ಟ್‌ಗೆ ಅಭಿನಂದನೆ ಸಲ್ಲಿಸಿದರು.
ಮಾತೃದೇವೋ ಟ್ರಸ್ಟ್‌ನಿಂದ ಬೀದಿಬದಿ ತರಕಾರಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ
