ವಿದ್ಯಾರ್ಥಿಗಳ ಸ್ವಾವಲಂಬನೆಗೆ ಕೌಶಲ್ಯ ತರಬೇತಿ ಅಗತ್ಯ

ವಿದ್ಯಾರ್ಥಿಗಳ ಸ್ವಾವಲಂಬನೆಗೆ ಕೌಶಲ್ಯ ತರಬೇತಿ ಅಗತ್ಯ

ಊಟದ ತಟ್ಟೆಗಳ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ 

ರಾಣೇಬೆನ್ನೂರು, ಜೂ.12-  ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಓದನ್ನು  ಬರೀ ಜ್ಞಾನಾರ್ಜನೆಗೆ ಸೀಮಿತಗೊಳಿಸದೇ ಕೌಶಲ್ಯ ತರಬೇತಿ, ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನೂ ನೀಡಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು  ಶಿಕ್ಷಕರು ಸಹಾಯ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದ 7ನೇ ನಂಬರ್ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಯಿ ರಾಘವೇಂದ್ರ  ಸೇವಾ ಸಮಿತಿ ವತಿಯಿಂದ ಕೊಡಮಾಡಲಾದ ತಟ್ಟೆಗಳನ್ನು ವಿತರಿಸಿ ಶಾಸಕರು ಮಾತನಾಡುತ್ತಿದ್ದರು.  ಹೀಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದರೆ, ಭಾರತ ವಿಶ್ವಗುರು ಸ್ಥಾನ ಪಡೆಯಲು ಸಾಧ್ಯವೆಂದು ಅವರು ಹೇಳಿದರು.

ತಾಲ್ಲೂಕಿನ 50 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮೂಲ ಸೌಕರ್ಯಗಳೊಂದಿಗೆ ಕಂಪ್ಯೂ ಟರ್ ಶಿಕ್ಷಣ ಹಾಗೂ ಡಿಜಿಟಲ್ ಗ್ರಂಥಾಲಯ ಒದಗಿಸುವ ಹಾಗೂ ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳ ಸ್ಥಾಪನೆಯ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಕಾರ್ಯೋನ್ಮುಖವಾಗಲಿದೆ ಎಂದು ಶಾಸ ಕರು ಹೇಳಿದರು.

ಸಮಿತಿ ಅಧ್ಯಕ್ಷೆ  ಪ್ರೇಮ ಬೆಂಗಳೂರು ಮಾತನಾಡಿ, ತಮ್ಮ ಸಂಸ್ಥೆ ಈಗಾಗಲೇ ಐದು ವಿದ್ಯಾರ್ಥಿ ಗಳನ್ನ ದತ್ತು ಪಡೆದಿದ್ದು ಅವರ ಸಂಪೂರ್ಣ ಶಿಕ್ಷಣದ ಹೊಣೆ ಹೊತ್ತಿದೆ ಎಂದರು. ಜಯಶ್ರೀ ಬೆಂಗಳೂರು, ಸಿದ್ದಣ್ಣ ಅಂಬಲಿ, ರಕ್ಷಣಾ ವೇದಿಕೆಯ ಗಣೇಶ ಗೋಣಿಬಸಣ್ಣ, ಮಾರುತಿ ಮುಂಡರಗಿ, ರೇಣುಕಾ ಲಮಾಣಿ, ಕವಿತಾ ಮತ್ತಿತರರಿದ್ದರು.

error: Content is protected !!