ರೋವರ್ಸ್‌, ರೇಂಜರ್ಸ್‌ಗಳಿಂದ ಸ್ವಚ್ಛತಾ ಕಾರ್ಯಕ್ರಮ

ರೋವರ್ಸ್‌, ರೇಂಜರ್ಸ್‌ಗಳಿಂದ ಸ್ವಚ್ಛತಾ ಕಾರ್ಯಕ್ರಮ

ದಾವಣಗೆರೆ, ಜೂ.12- ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀಗಿರಿ ರಂಗನಾಥ ಬೆಟ್ಟ ದಾನವಾಡಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿ ಹಾಗೂ ಸೈಕ್ಲಿಸ್ಟ್‌ ದೀಪಕ್‌ ತಿಮ್ಮೋಜಿ ಚಾಲನೆ ನೀಡಿದರು.

ಜಿಲ್ಲಾ ಸ್ಕೌಟ್ಸ್‌-ಗೈಡ್ಸ್‌ ಸಂಸ್ಥೆ, ಹಿಮಾಲಯನ್‌ ಅಡ್ವೆಂಚರ್ ಆಂಡ್‌ ನೇಚರ್‌ ಅಕಾಡೆಮಿ ಹಾಗೂ ತಿಮ್ಮೋಜಿ ಆರ್ಕಿಟೆಕ್ಸ್‌ ಅವರ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ನಿಸ್ವಾರ್ಥ ಸೇವೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡ ಗಿದ ರೋವರ್ಸ್‌ ಹಾಗೂ ರೇಂಜರ್ಸ್‌ಗಳ ಸೇವೆಯನ್ನು ಚನ್ನಗಿರಿ ಶಿಕ್ಷಣಾಧಿಕಾರಿ ಎಲ್‌. ಜಯಪ್ಪ ಶ್ಲ್ಯಾಘಿಸಿದರು.

ಶ್ರದ್ಧೆಯಿಂದ ಪರಿಸರ ಬಗ್ಗೆ ಕಾಳಜಿ ಹೊಂದಿದ ರೋವರ್ಸ್‌ ಹಾಗೂ ರೇಂಜರ್ಸ್‌ಗಳ ಸೇವೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್‌ ಎಚ್‌. ದೊಡ್ಡಮನಿ ಹರ್ಷ ವ್ಯಕ್ತಪಡಿಸಿದರು.

ಹಿಮಾಲಯನ್‌ ಅಡ್ವೆಂಚರ್ ಆಂಡ್‌ ನೇಚರ್‌ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎನ್‌.ಕೆ. ಕೊಟ್ರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಪಾರ್ಟಿಯ ನೆಪದಲ್ಲಿ ಸುಂದರ ಪರಿಸರದಲ್ಲಿ ತಿಂದು ಕುಡಿದು, ತಾವು ತಂದಂತಹ ಪ್ಲಾಸ್ಟಿಕ್‌ ಲೋಟ, ಪ್ಲೇಟ್ಸ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲಾ ಪಂಚಾಯತ್‌ ಪ್ರೋಗ್ರಾಮ್‌ ಆಫೀಸರ್‌ ಪೂರ್ಣಿಮಾ ಸ್ಥಳಕ್ಕೆ ಭೇಟಿ ನೀಡಿದರು.

ಈ ವೇಳೆ ಬಿ.ಆರ್‌.ಪಿ. ಶಂಕರಪ್ಪ, ಸಿ.ಆರ್.ಪಿ. ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಎಂ. ರತ್ನಾ, ಜಿಲ್ಲಾ ಸಹ ಕಾರ್ಯದರ್ಶಿ ಡಾ. ಶಕುಂತಲಾ, ರೇಂಜರ್ ಲೀಡರ್ ಅಮೂಲ್ಯ, ಡಿ.ಬಿ. ಶಶಿಕುಮಾರ್, ಎಸ್.ಜಿ.ವಿ ಅಶ್ವಿನಿ, ಚನ್ನಬಸಪ್ಪ, ಸ್ವಾಮಿ, ಕೃಷ್ಣಮೂರ್ತಿ, ಎನ್. ನವೀನ್ ಮತ್ತಿತರರಿದ್ದರು.

error: Content is protected !!