ವೇತನ ವಿಳಂಬ : ಹರಿಹರ ಸಾರ್ವಜನಿಕ ಆಸ್ಪತ್ರೆ `ಡಿ’ ಗ್ರೂಪ್ ನೌಕರರ ಪ್ರತಿಭಟನೆ

ವೇತನ ವಿಳಂಬ : ಹರಿಹರ ಸಾರ್ವಜನಿಕ ಆಸ್ಪತ್ರೆ `ಡಿ’ ಗ್ರೂಪ್ ನೌಕರರ ಪ್ರತಿಭಟನೆ

ಹರಿಹರ, ಜೂ. 12- ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯ `ಡಿ’  ಗ್ರೂಪ್ ನೌಕರರು ಕೆಲಸವನ್ನು ಸ್ಥಗಿತಗೊಳಿಸಿ, ಪ್ರತಿಭಟಿಸುವ ಮೂಲಕ ವೇತನ ನೀಡುವಂತೆ ಆಗ್ರಹಿಸಿದರು. 

ಈ ವೇಳೆ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಗಳಾದ ದುರುಗೇಶ, ಹರೀಶ್, ನಿಂಗರಾಜ್, ಜ್ಯೋತಿ, ರತ್ನಮ್ಮ, ಕರಿಬಸಮ್ಮ ಚಂದ್ರು ಮಾತನಾಡಿ, ಕಳೆದ 3 ತಿಂಗಳಿಂದ ನಮಗೆ ವೇತನ ನೀಡದೇ ಇರುವುದರಿಂದ ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ‌. ಆದ್ದರಿಂದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆದಷ್ಟು ಬೇಗನೆ ವೇತನ ನೀಡುವಂತೆ ಆಗ್ರಹಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಹನಮನಾಯ್ಕ್ ದೂರವಾಣಿಯಲ್ಲಿ ಮಾತನಾಡಿ, ಹಳೆಯ ಟೆಂಡರ್‌ದಾ ರರಾದ ದೀಕ್ಷಾ ಏಜೆನ್ಸಿಯವರು ಒಂದು ತಿಂಗಳ ವೇತನ ಮತ್ತು ಟಾರ್ಗೆಟ್ ಏಜೆನ್ಸಿಯವರು ಎರಡು ತಿಂಗಳ ವೇತನ   ನೀಡುವಲ್ಲಿ ವಿಳಂಬವಾಗಿದ್ದು, ಅವರಿಗೆ ಇಂದು ದೂರವಾಣಿ ಕರೆಯನ್ನು ಮಾಡಲಾಗಿದ್ದು,    ಶೀಘ್ರವಾಗಿ ಹಣವನ್ನು ಪಾವತಿ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ನಾಳೆ ಅಥವಾ ನಾಡಿದ್ದು ಎಲ್ಲಾ ನೌಕರರ ವೇತನವನ್ನು ನೀಡಲಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸಹಾಯಕ ಆಡಳಿತ ಅಧಿಕಾರಿ ವಿಶ್ವನಾಥ, ಲೆಕ್ಕಾಧಿಕಾರಿ ಮಲ್ಲೇಶ್, ತಿಪ್ಪೇಸ್ವಾಮಿ  ಉಮೇಶ್, ಚೇತನ್, ಹರೀಶ್, ವೀರೇಂದ್ರ, ದುರುಗೇಶ್, ಎಂ. ಮಂಜುನಾಥ್, ರಜನಿಕಾಂತ್, ಮಂಜುನಾಥ್, ಮಂಗಳಮ್ಮ, ಕರಿಬಸಮ್ಮ, ಲಕ್ಷ್ಮಮ್ಮ, ದಾಗಿಭಾಯಿ, ವಿಜಯಮ್ಮ, ಹೀರಾಬಾಯಿ, ಅನುಸೂಯಮ್ಮ, ಕಾಂತಮ್ಮ ಇತರರು ಹಾಜರಿದ್ದರು

error: Content is protected !!