ದಾವಣಗೆರೆ, ಜೂ. 12 – ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವೃತ್ತದ ಮೇಲ್ವಿಚಾರಕಿಯರಿಗೆ ಕೇಂದ್ರ ಸರ್ಕಾರದ ಯೋಜನೆಯಾದ ರಾಷ್ಟ್ರೀಯ ಪೋಷಣ್ ಅಭಿಯಾನ (ಮಿಷನ್ 2.0) ಯೋಜನೆಯಡಿ ಸ್ಯಾಮ್‍ಸಾಂಗ್ ಗ್ಯಾಲಾಕ್ಸಿ 40.ಎಸ್ ಸ್ಮಾರ್ಟ್ ಪೋನ್‍ಗಳನ್ನು ವಿತರಿಸಲಾಗಿದೆ.
ಈ ಫೋನ್ ಮೂಲಕ ಅಂಗನವಾಡಿ ಕಾರ್ಯಕರ್ತೆ ಯರು ಪೋಷಣ್ ಟ್ರ್ಯಾಕರ್ ಆಪ್ ಮೂಲಕ ಪ್ರತಿ ದಿನ ಅಂಗನವಾಡಿ ಕೇಂದ್ರದ ದೈನಂದಿನ ಚಟುವಟಿಕೆಗಳಾದ ಮಕ್ಕಳ ಹಾಜರಾತಿ, ಶಾಲಾ ಪೂರ್ವ ಶಿಕ್ಷಣ ಹಾಗೂ ಬಿಸಿ ಊಟ ವಿತರಣೆ ಮುಂತಾದವುಗಳನ್ನು ಪೋಷಣ್ ಟ್ರ್ಯಾಕ ರ್‌ನಲ್ಲಿ ತಪ್ಪದೇ ಅಳವಡಿಸಬೇಕು ಹಾಗೂ ಸರ್ಕಾರ ದಿಂದ ನೀಡಿರುವ ಸ್ಮಾರ್ಟ್ ಪೋನ್‍ಗಳನ್ನು ಸದ್ಬಳಕೆ ಮಾಡಿಕೊಂಡು, ಇಲಾಖಾ ಮಾಹಿತಿಯನ್ನು ನಿರ್ವಹಿ ಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ರಾಜಕುಮಾರ್ ರಾಠೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಕುಮಾರ್ ಜಿ.ಎಸ್, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೋಷಣ್ ಅಭಿಯಾನ ಯೋಜನೆಯ ಸಿಬ್ಬಂದಿಗಳು ಹಾಜರಿದ್ದರು.