ಗಾಣಿಗರ ಸಮಾಜದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಗಾಣಿಗರ ಸಮಾಜದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ದಾವಣಗೆರೆ, ಜೂ. 11 – ಜಿಲ್ಲೆಯ ಗಾಣಿಗರ ಮಹಿಳಾ ಸಮಾಜದ ವತಿಯಿಂದ 2023 -2024ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಗಾಣಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗಾಣಿಗ ವಧು – ವರರ ಸಮಾವೇಶವು ನಗರದಲ್ಲಿ ನಡೆಯಿತು.  

ಶ್ರೀ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾ ಗಾಣಿಗ ಸಮಾಜದ ಕಚೇರಿಯಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಮಾಜಿ ಈಟಿವಿ ಅನ್ನದಾತ ವರದಿಗಾರ, `ದೇಸಾಯಿ’ ಚಿತ್ರ ನಿರ್ಮಾಪಕ, ನಟ ಮಹಾಂತೇಶ್ ಚೋಳಚ ಗುಡ್ಡ, ನಟ ಪ್ರವೀಣ್‌ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಬಸವ ಜಯ ಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ, ಸುರೇಶ್ ಬಾಬು, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಉತ್ತರ ಕರ್ನಾಟಕ ನೆಲ ಮೂಲ ಸಂಸ್ಕೃತಿ ಕತೆಯನ್ನು ಆಧರಿಸಿದ ದೇಸಾಯಿ ಚಿತ್ರ ನಟ ರಾದ ಪ್ರವೀಣ್, ನಿರ್ಮಾಪಕ, ನಟ ಮಹಾಂತೇಶ್ ಚೊಳಚಗುಡ್ಡ, ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಸಮಾರಂಭದ ಅಧ್ಯಕ್ಷತೆಯನ್ನು  ಜಿಲ್ಲಾ ಮಹಿಳಾ ಗಾಣಿಗ ಸಂಘದ ಅಧ್ಯಕ್ಷರಾದ ಶ್ರೀಮತಿ ಉಮಾ ವೀರಭದ್ರಪ್ಪ ವಹಿಸಿದ್ದರು.

error: Content is protected !!