ಸಂಭ್ರಮದ ಶ್ರೀ ವಿಠಲ ರುಕ್ಮಿಣಿ ದಿಂಡಿ ಮಹೋತ್ಸವ

ಸಂಭ್ರಮದ ಶ್ರೀ ವಿಠಲ ರುಕ್ಮಿಣಿ ದಿಂಡಿ ಮಹೋತ್ಸವ

ಹರಿಹರ, ಜೂ.6- ನಗರದ ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ವತಿಯಿಂದ ಶ್ರೀ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು.

ನಾಮದೇವ ಕಲ್ಯಾಣ ಮಂಟಪ ಆವರಣದಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ದೇವರಿಗೆ ಬೆಳಗ್ಗೆ ಪಂಚಪದಿ ಕಾಕಡಾರತಿ ಭಜನೆ, ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಪಾರಾಯಣ ಸೇರಿದಂತೆ ವಿಶೇಷ ಪೂಜೆ, ಮಹಾಮಂಗಳಾರತಿ ಅರ್ಪಿಸಿ, ಪಲ್ಲಕ್ಕಿ ಉತ್ಸವದ ಮೆರವಣಿಗೆ ಆರಂಭಗೊಂಡಿತು. 

ಈ ಸಂದರ್ಭದಲ್ಲಿ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಶಂಕರ್ ಖಟಾವ್ಕರ್, ಉಪಾಧ್ಯಕ್ಷ ಡಿ.ಜಿ. ರಘುನಾಥ್, ಕಾರ್ಯದರ್ಶಿ ಐರಣಿ ನಾಗರಾಜ್, ಸಹ ಕಾರ್ಯದರ್ಶಿ ಪರಶುರಾಮ್ ಅಂಬೇಕರ್, ಮೆಡ್ಲೇರಿ ತುಕಾರಾಮ್, ಖಜಾಂಚಿ ಪರಶುರಾಮ್ ಹೋವಳೆ, ಕಾಳಪ್ಪ ಬೊಂಗಾಳೆ, ಸುಭಾಷ್ ಬೊಂಗಾಳೆ, ಜಗದೀಶ್ ಮಹೇಂದ್ರಕರ್, ರಾಘವೇಂದ್ರ ಬೊಂಗಾಳೆ, ಅರುಣ್ ಕುಮಾರ್ ಬೊಂಗಾಳೆ, ಚಂದ್ರಕಾಂತ ಹೋವಳೆ, ಗೋಪಾಲ, ಭೋಜರಾಜ್ ಹೋವಳೆ, ಮನೋಹರ ಬೊಂಗಾಳೆ, ಮುರುಳಿಧರ್ ದುರಗೋಜಿ, ಪದ್ಮಾ ಸುಭಾಷ್, ಮುಕ್ತ ಕುಮಾರ್, ಕಲಾವತಿ ರವೀಂದ್ರನಾಥ, ನಿರ್ಮಲ ರಮೇಶ್, ದೀಪ ಮಂಜುನಾಥ್, ಲಕ್ಷ್ಮೀ ಮೋಹನ್ ದುರುಗೋಜಿ, ಅಂಜನಾ ಶಂಕರ್ ಖಟಾವ್ಕರ್, ಸುರೇಖಾ ಅರುಣ್ ಕುಮಾರ್ ಬೊಂಗಾಳೆ, ನಾಗರತ್ನ, ವಾಸುದೇವ ಮಹೇಂದ್ರಕರ್, ಮೋಹನ್ ದುರುಗೋಜಿ, ಸಂತೋಷ ಕುಮಾರ್, ಪಾಂಡುರಂಗ ಪಾಲಂಕರ್,  ಸಚ್ಚಿನ್ ಬೊಂಗಾಳೆ, ನಾಗರತ್ನ ಜ್ಞಾನೇಶ್ವರ ಹೋವಳೆ ಇತರರು ಹಾಜರಿದ್ದರು.

error: Content is protected !!