ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ನ ವಾರ್ಷಿಕೋತ್ಸವ

ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ನ ವಾರ್ಷಿಕೋತ್ಸವ

ದಾವಣಗೆರೆ, ಜೂ.3- ಇಲ್ಲಿನ ಜಯನಗರದಲ್ಲಿನ ಮಾತೃದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ನ ಕಚೇರಿಯಲ್ಲಿ ಶನಿವಾರ ಟ್ರಸ್ಟಿನ 4ನೇ  ವರ್ಷದ ವಾರ್ಷಿಕೋತ್ಸವ ಹಾಗೂ ಪೋತುಲ ಶ್ರೀನಿವಾಸ ಅವರ ಜನ್ಮ ದಿನ ಆಚರಿಸಲಾಯಿತು.

ಈ ವೇಳೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಗುರು ಹಾಗೂ ಸಾಮಾಜಿಕ ಸೇವೆ ಮಾಡದೇ ಸತ್ತರೆ ಜೀವನ ವ್ಯರ್ಥ ಎಂದು ಬಸವಣ್ಣನವರ ನಿದರ್ಶನದೊಂದಿಗೆ ಹೇಳಿದರು.

ಮಾಜಿ ಮೇಯರ್‌ ಬಿ.ಜೆ. ಅಜಯ್ ಕುಮಾರ್ ಮತ್ತು ರೈತಪರ ಹೋರಾಟಗಾರ ಸತೀಶ್‌ ಕೊಳೇನ ಹಳ್ಳಿ ಮಾತನಾಡಿದರು. ಈಶ್ವರೀಯ ವಿಶ್ವವಿದ್ಯಾ ಲಯದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ಮಾಜಿ ಶಾಸಕ ಎಸ್‌.ಎ ರವೀಂದ್ರನಾಥ್, ಲುಂಬಿನಿ ಪ್ಯಾರಾ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಜಿ.ವಿ. ಗಂಗಾಧರ್, ಹಸಿರು ದಳ ವ್ಯವಸ್ಥಾಪಕ ಎಚ್.ಎ. ಗುರುರಾಜ್ ಮತ್ತು ಇತರರು ಇದ್ದರು.

error: Content is protected !!