ಹರಪನಹಳ್ಳಿ: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಶೇ.73.14 ರಷ್ಟು ಮತದಾನ

ಹರಪನಹಳ್ಳಿ: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಶೇ.73.14 ರಷ್ಟು ಮತದಾನ

ಹರಪನಹಳ್ಳಿ, ಜೂ.3- ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ.73.14 ರಷ್ಟು ಮತದಾನದ ದಾಖಲೆಯ ಜತೆಗೆ ಶಾಂತಿಯುತ ಮತದಾನ ನಡೆಯಿತು.

ಪಟ್ಟಣದ ಜ್ಯೂನಿಯರ್ ಕಾಲೇಜಿನಲ್ಲಿ ಮೂರು ಮತಗಟ್ಟೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿತ್ತು, ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮತದಾರರು ಆಗಮಿಸಿ ಮತಗಟ್ಟೆ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು.

ಕಳೆದ ಭಾನುವಾರ ರಾತ್ರಿ ಮಳೆ ಸುರಿದ ಪರಿಣಾಮ ಸೋಮವಾರ ಪಟ್ಟಣದಲ್ಲಿ ತಂಪೆರೆದ ವಾತಾವರಣ ಇತ್ತು, ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೂ ಬಿರುಸಿನಿಂದ ಮತದಾನ ನಡೆಯಿತು.

ತಾಲ್ಲೂಕಿನಲ್ಲಿ ಒಟ್ಟು 3549 ಪದವೀಧರ ಮತದಾರರ ಪೈಕಿ 2596 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಸಂಜೆ 4 ಗಂಟೆಗೆ ಮತಗಟ್ಟೆ ಕೇಂದ್ರದ ಮುಖ್ಯ ಗೇಟನ್ನು ಬಂದ್ ಮಾಡಿದ ಪರಿಣಾಮ ತಡವಾಗಿ ಬಂದ ಮತದಾರರು ವಾಪಸ್‌ ತೆರಳಿದ ಘಟನೆ ನಡೆಯಿತು.

 ಮತಗಟ್ಟೆ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ಚಿದಾನಂದ, ಗುರುಸ್ವಾಮಿ, ತಹಶೀಲ್ದಾರ್‌ ಗಿರೀಶ್‌ ಬಾಬು ಭೇಟಿ ನೀಡಿ ಪರಿಶೀಲಿಸಿದರು.

error: Content is protected !!