ಹರಪನಹಳ್ಳಿ : ನಿರಂತರ ಪರಿಶ್ರಮ, ಸತತ ಪ್ರಯತ್ನ, ತ್ಯಾಗದಿಂದ ಯಶಸ್ಸು ಸಾಧ್ಯ

ಹರಪನಹಳ್ಳಿ : ನಿರಂತರ ಪರಿಶ್ರಮ, ಸತತ ಪ್ರಯತ್ನ, ತ್ಯಾಗದಿಂದ ಯಶಸ್ಸು ಸಾಧ್ಯ

ಹರಪನಹಳ್ಳಿ, ಜೂ.3- ಯಶಸ್ಸು ಸುಲಭವಾಗಿ ದೊರಕುವಂತಹದ್ದಲ್ಲ, ನಿರಂತರ ಪರಿಶ್ರಮ, ಸತತ ಪ್ರಯತ್ನ, ತ್ಯಾಗದಿಂದ ಮಾತ್ರ ಯಶಸ್ಸು ಸಿಗುತ್ತದೆ. ತಮಗೆ ದೊರಕಿದ ಪ್ರಶಸ್ತಿ ಒಂದು ವರ್ಷದ ನಿರಂತರ ಪ್ರಯತ್ನದ ಪ್ರತಿಫಲ ಎಂದು ನವಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಬಸಮ್ಮ ಕಲಾ ಮಂದಿರದಲ್ಲಿ ದಿ.ಬಣಕಾರ ಶಾರದಮ್ಮ, ದಿ.ತರಕಾರಿ ಬಸಮ್ಮ ಮತ್ತು ದಿ.ಕೆ.ರತ್ನಮ್ಮನವರ ಸ್ಮರಣಾರ್ಥ ಏರ್ಪಡಿಸಿದ್ದ `ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಇರುವೆ ಹಿಮಾಲಯ ಪರ್ವತ ಏರಿ ಸಾಧಿಸಿದ ಪ್ರೇರಕ ಕಥೆ ಮತ್ತು ಸ್ವಾತಂತ್ರ್ಯ ಪಡೆದ ಉದಾಹರಣೆಗಳನ್ನು ಹೇಳಿ, ವಿದ್ಯಾರ್ಥಿಗಳಿಗಳು ಇದೇ ರೀತಿ ಪ್ರಯತ್ನ ಪಟ್ಟರೆ ಗೆಲುವು ನಿಮ್ಮದೇ ಎಂದು ಪ್ರೇರಕ ನುಡಿಗಳನ್ನಾಡಿದರು. 

ಪುರಸಭಾ ಮಾಜಿ ಅಧ್ಯಕ್ಷರಾದ ಪುಷ್ಪಾ ದಿವಾಕರ್ ಮಾತನಾಡಿ,  ಮಲ್ಲಿಕಾರ್ಜುನ ದಂಪತಿಯ ಸಮಾಜ ಮುಖಿ ಕಾರ್ಯಕ್ರಮವನ್ನು ಶ್ಲ್ಯಾಘಿಸಿದರು.

ಮುರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಕೆ.ಶಶಿಧರ ಮಾತನಾಡಿ, ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ತಮ್ಮ ಸಂಬಳದ ಅರ್ಧ ಭಾಗವನ್ನು ಇಂತಹ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದ್ದಾರೆ. ಅವರ ಸೇವೆ ಶ್ಲ್ಯಾಘನೀಯ ಎಂದು ಹೇಳಿದರು.

ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿ, ಸನ್ಮಾನ ಪಡೆದ ವಿದ್ಯಾರ್ಥಿಗಳು ಮುಂದೆ ಕನ್ನಡ ನಾಡು ನುಡಿ ಮತ್ತು ಸಮಾಜ ಸೇವೆ ಮಾಡುವಂತಾಗಬೇಕು. ವಿದ್ಯಾರ್ಥಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆದು ಇಂತಹ ಕಾರ್ಯಕ್ರಮವನ್ನು ಮಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.  

ಅಧ್ಯಕ್ಷತೆಯನ್ನು ಹೂವಿನ ಹಡಗಲಿ ಪುರಸಭಾ ಮಾಜಿ ಸದಸ್ಯರಾದ ವಜ್ರನಾಭಿ ಬಣಕಾರ ವಹಿಸಿದ್ದರು. 

ರೈತ ಭಾರತ ಕಿಸಾನ್ ಸಂಘದ ತಾಲ್ಲೂಕು ಉಪಾಧ್ಯಕ್ಷ ಹುಲಿಕಟ್ಟಿ ರೇವಣ್ಣ ಕುಂಬಾರ, ಕೆ.ಮಂಜುಳ, ಮಕ್ಬೂಲ್ ಬಾಷಾ, ಉಪನ್ಯಾಸಕ ಸಿ.ಎಂ.ಕೊಟ್ರಯ್ಯ ಉಪಸ್ಥಿತರಿದ್ದರು. 

error: Content is protected !!