ಅಧಿಕ ಮತಗಳ ಅಂತರಿಂದ ಶ್ರೀನಿವಾಸ್ ಗೆಲುವು : ವಿಶ್ವಾಸ

ಅಧಿಕ ಮತಗಳ ಅಂತರಿಂದ ಶ್ರೀನಿವಾಸ್ ಗೆಲುವು : ವಿಶ್ವಾಸ

ಹರಿಹರ,ಜೂ.3- ಇಂದು ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರು ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಹೇಳಿದರು.

ನಗರದ ಜಿ.ಬಿ.ಎಂ‌. ಎಸ್. ಶಾಲಾ ಕೊಠಡಿಯಲ್ಲಿ ನಡೆದ ಆಗ್ನೇಯ ಶಿಕ್ಷಕರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಪರ ಮತಯಾಚನೆ ಮಾಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. 

ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಹಲವಾರು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾ ಶಿಕ್ಷಕರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡುತ್ತಾ ಬಂದಿದ್ದಾರೆ. 

ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಪರಾಜಿತರಾದರೂ ಸಹ ಶಿಕ್ಷಕರ ಜೊತೆಗೆ ಸದಾ ಕಾಲ ಒಡನಾಟದಲ್ಲಿ ಇರುವುದರಿಂದ ಮತ್ತು ಅವರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಅವರಿಗೆ ಈ ಬಾರಿ ಬಹುಮತದೊಂದಿಗೆ ಜಯ ಖಂಡಿತವಾಗಿ ಲಭಿಸುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ. ರೇವಣಸಿದ್ದಪ್ಪ, ಗುತ್ತೂರು ಜಿ.ಬಿ. ಹಾಲೇಶಗೌಡ್ರು, ಏಜಾಜ್ ಆಹ್ಮದ್, ಕೆ.ಜಿ. ಸಿದ್ದೇಶ್, ಎಲ್.ಬಿ. ಹನುಮಂತಪ್ಪ, ಎಂ.ಬಿ ಅಬಿದಾಲಿ, ಟಿ.ಜೆ. ಮುರುಗೇಶಪ್ಪ, ಮಹಮ್ಮದ್ ಫೈರೋಜ್, ಬಿ.ಎನ್. ರಮೇಶ್, ಸಂತೋಷ ನೋಟದರ್, ಅರುಣ್ ಬೊಂಗಾಳೆ, ನಾಗೇಂದ್ರಪ್ಪ ರಾಜನಹಳ್ಳಿ, ನಿಧಿ, ರಮೇಶ್ ನಾಯ್ಕ್, ಜೋಸೆಫ್ ದಿವಾಕರ್, ಕೆ.ಬಿ. ರಾಜಶೇಖರ್, ಸಂತೋಷ ದೊಡ್ಡಮನೆ, ಶ್ರೀನಿವಾಸ್ ಮೂರ್ತಿ, ಬಾಷಾ, ಯಮನೂರು, ಶಿವಪ್ಪ, ಆನಂದ್,  ಭಾಗ್ಯಮ್ಮ, ನಾಗಮ್ಮ, ಪ್ರಕಾಶ್ ಇತರರು ಹಾಜರಿದ್ದರು.

error: Content is protected !!