ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಹರಿಹರದಲ್ಲಿ ಶೇ. 97.18 ಶಾಂತಿಯುತ ಮತದಾನ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಹರಿಹರದಲ್ಲಿ ಶೇ. 97.18 ಶಾಂತಿಯುತ ಮತದಾನ

ಹರಿಹರ, ಜೂ.3- ನಗರದಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೇ 97.18 ರಷ್ಟು ಶಾಂತಿಯುತ ಮತದಾನವಾಗಿದೆ.

ಜಿ.ಬಿ.ಎಂ.ಎಸ್. ಪ್ರೌಢಶಾಲಾ ಕೊಠಡಿಯಲ್ಲಿ ನಡೆದ ಚುನಾವಣೆಯಲ್ಲಿ 297 ಪುರುಷ ಮತದಾರರು ಹಾಗೂ 151 ಮಹಿಳಾ ಮತದಾರರು ಸೇರಿದಂತೆ ಒಟ್ಟು 448 ಶಿಕ್ಷಕ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. 

ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರು ಚುನಾವಣೆ ಕೊಠಡಿಯನ್ನು ಪರಿಶೀಲನೆ ನಡೆಸಿ, ಚುನಾವಣೆ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದರು. 

ಚುನಾವಣಾ ಕೊಠಡಿಯ ಹೊರಗಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರವಾಗಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್, ಪಕ್ಷೇತರ ಅಭ್ಯರ್ಥಿ ವಿನೋದ ಶಿವರಾಜ್ ಮತ್ತು ಲೋಕೇಶ್‌ ತಾಳಿಕಟ್ಟೆ ಅವರ ಪರವಾಗಿರುವ, ಕಾರ್ಯಕರ್ತರು, ಅಭಿಮಾನಿಗಳು ಮತಯಾಚನೆ ಮಾಡಿದರು.

ಚುನಾವಣೆ ಸ್ಕ್ವಾಡ್ ಆಗಿ ಬಿಇಓ ಹನುಮಂತಪ್ಪ, ಲೋಕೋಪಯೋಗಿ ಇಲಾಖೆ ಎಇಇ ಶಿವಮೂರ್ತಿ, ಪಶುಪಾಲನೆ ಇಲಾಖೆಯ ಸಿದ್ದೇಶ್ ಯಾವುದೇ ರೀತಿಯ ಚುನಾವಣೆ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದರು.

ಸಿಪಿಐ ಸುರೇಶ್ ಸರಗಿ, ಪಿಎಸ್ಐ ದೇವಾನಂದ್, ಎಎಸ್ಐ ಮನ್ಸೂರ್ ಆಹ್ಮದ್, ಪೊಲೀಸ್ ಸಿಬ್ಬಂದಿಗಳಾದ ಬಿ. ಎಂ. ಸಿರಿಗೆರೆ, ರಿಜ್ವಾನ್, ಇತರರು  ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. 

ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ‌. ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಗುತ್ತೂರು ಜಿ ಬಿ.
ಹಾಲೇಶಗೌಡ್ರು, ಟಿ‌.ಜೆ. ಮುರುಗೇಶಪ್ಪ, ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ಎ.ಬಿ. ವಿಜಯಕುಮಾರ್, ಅಬ್ದುಲ್ ಅಲೀಂ, ಕೆ.ಪಿ.ಸಿ.ಸಿ. ಸದಸ್ಯ ಬಿ. ರೇವಣಸಿದ್ದಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಎಂ.ಬಿ. ಅಬಿದಾಲಿ, ನಗರಸಭೆ ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ್, ಸಂತೋಷ್‌ ದೊಡ್ಡಮನಿ, ಜೋಸೆಫ್ ದಿವಾಕರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಐರಣಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿ.ಎನ್‌ ಹುಲುಗೇಶ್, ಸಂತೋಷ ನೋಟದರ್, ಹೆ‌ಚ್. ಕೆ. ಕೊಟ್ರಪ್ಪ, ಜೆಡಿಎಸ್ ಪಕ್ಷದ ಮುಖಂಡರಾದ ಅಡಕಿ ಕುಮಾರ್, ಹಾಲಸ್ವಾಮಿ, ಶಿಕ್ಷಕರಾದ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ವಿ.ಬಿ. ಕೊಟ್ರೇಶ್, ಬಿ.ಬಿ. ರೇವಣ್ಣನಾಯ್ಕ್, ಡಿ.ಎಂ. ಮಂಜುನಾಥಯ್ಯ, ರೇವಣಸಿದ್ದಪ್ಪ, ಎ. ರಿಯಾಜ್ ಆಹ್ಮದ್, ಧನರಾಜ್, ಬಾಷಾ, ಶಿವಮೂರ್ತಿ, ರೀನಾ, ಪ್ರಕಾಶ್ ಭಾನುವಳ್ಳಿ, ಜಯಣ್ಣ, ತಿಪ್ಪಣ್ಣರಾಜ್, ನಿವೃತ್ತ  ಶಿಕ್ಷಕರಾದ ಕೃಷ್ಣಮೂರ್ತಿ ಶೆಟ್ಟಿ ಎಂ.ಎನ್. ಬಸವರಾಜಪ್ಪ ಹಾಜರಿದ್ದರು.

error: Content is protected !!