ಚಂದಿರ – ತಾರೆಗಳು ಹತ್ತಿರ, ನೆರೆ – ಹೊರೆಯ ಸಂಬಂಧ ದೂರ

ಚಂದಿರ – ತಾರೆಗಳು ಹತ್ತಿರ, ನೆರೆ – ಹೊರೆಯ ಸಂಬಂಧ ದೂರ

ಹರಪನಹಳ್ಳಿ ತರಬೇತಿ ಕಾರ್ಯಾಗಾರದಲ್ಲಿ ಹಡಗಲಿ ಪ್ರಗತಿಪರ ಚಿಂತಕ ದಾರುಕೇಶ್ ರೆಡ್ಡಿ ವಿಷಾದ

ಹರಪನಹಳ್ಳಿ, ಜೂ. 2- ಆಧುನಿಕ ಜಗತ್ತಿನಲ್ಲಿ ನಾವು ಬಹಳ ಮುಂದುವರೆದಿದ್ದು, ಆಕಾಶದಲ್ಲಿ ರುವ ದೂರದ ನಕ್ಷತ್ರಗಳು, ಚಂದಿರ ನಮಗೆ ಹತ್ತಿರವಾಗಿ ಕಾಣುತ್ತವೆ, ದುರಂತವೆಂದರೆ ಇಲ್ಲೇ ಇರುವ ಪಕ್ಕದ ಮನೆಯವರು, ನೆರೆ-ಹೊರೆ ಯವರು ನಮಗೆ ದೂರ-ದೂರ ಎನ್ನುವಂತೆ ನಮ್ಮ ಸಂಬಂಧಗಳಿವೆ ಎಂದು ಹೂವಿನಹಡಗಲಿಯ  ಪ್ರಗತಿಪರ ಚಿಂತಕ ದಾರುಕೇಶ್ ರೆಡ್ಡಿ ಅವರು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ  ತೆಗ್ಗಿನ ಮಠ ಸಂಸ್ಥಾನದ ವ್ಯಾಪ್ತಿಯಲ್ಲಿರುವ ಟಿಎಂಎಇ ಸಂಸ್ಥೆಯ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ, ಸ್ಥಳೀಯ ಜೆ.ಸಿ.ಐ  ವತಿಯಿಂದ ಏರ್ಪಡಿಸಲಾಗಿದ್ದ  ತರಬೇತಿ ಕಾರ್ಯಾಗಾರದಲ್ಲಿ   ಅವರು ಉಪನ್ಯಾಸ ನೀಡಿದರು.

ಮಾನವೀಯ ಮೌಲ್ಯ ಹೇಳುವುದಲ್ಲ, ಅದನ್ನು ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಹಿಂದೆ ಮಾರಲ್ ಎಜುಕೇಷನ್ ಅಂತ ಇತ್ತು. ಇಂದು ಶಿಕ್ಷಣ ಮಾರಾಟಕ್ಕಿದೆ. ಶಾಲಾ-ಕಾಲೇಜುಗಳು ಶಿಕ್ಷಣ ಕೊಡುತ್ತಿವೆ. ಆದರೆ ಸಂಸ್ಕಾರ ಮತ್ತು ಮೌಲ್ಯಗಳನ್ನು ನೀವೇ ಕಲಿಯಬೇಕಾಗಿದೆ ಎಂದರು.

ಜೆಸಿಐ ತಾಲ್ಲೂಕು ಅಧ್ಯಕ್ಷರಾದ ಪ್ರಿಯಾಂಕ ಅಧಿಕಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ,   ತಮ್ಮ ಸಂಸ್ಥೆಯು, ವಿದ್ಯಾರ್ಥಿಗಳು ಮತ್ತು ಯುವ ಜನಾಂ ಗಕ್ಕೆ ತರಬೇತಿ ಕೊಡುವುದನ್ನೇ   ಧ್ಯೇಯವನ್ನಾಗಿಸಿ ಕೊಂಡಿದ್ದು,  ಪ್ರಪಂಚದ 120 ದೇಶಗಳಲ್ಲಿ ಸಮಾ ಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದರು.

ಪ್ರಾಂಶುಪಾಲ ಕೆ.ಎಂ.ಚರಣ್, ಶಂಕ್ರಯ್ಯ, ನಂದಿನಿ, ಮಂಜುನಾಥ್, ಹೇಮಣ್ಣ ಮೋರಿಗೇರಿ, ಶರತ್ ಚಂದ್ರ, ವೀರನಗೌಡ್ರು ಉಪಸ್ಥಿತರಿದ್ದರು. ತರಬೇತಿಯಲ್ಲಿ ಉಪನ್ಯಾಸಕರಾದ ಭೂಮಿಕ, ಮಲ್ಲಮ್ಮ, ಆಯಿಶಾ,  ಪೂರ್ಣಿಮ, ನಾಗರಾಜ್, ಜೇಸಿ ಟಿ.ಎಂ.ವೀರೇಶ್ ಮತ್ತಿತರರು ಭಾಗವಹಿಸಿದ್ದರು.

error: Content is protected !!