ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ನಿಂದ 40 ಸಾವಿರ ರೂ. ಜಮ
ಮಲೇಬೆನ್ನೂರು, ಜೂ.2- ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಕೆ.ಕಾಮರಾಜ್ ಅವರು ತಮ್ಮ 60ನೇ ವರ್ಷದ ಜನ್ಮದಿನದ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 574 ಅಂಕಗಳನ್ನು ಪಡೆದ ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಯಶೋಧ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ 530 ಅಂಕ ಪಡೆದ ವಿಜಯಲಕ್ಷ್ಮಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 474 ಅಂಕ ಪಡೆದ ಸಂಕ್ಲೀಪುರದ ಕೆ.ಹೆಚ್.ಚಂದನ ಅವರನ್ನು ಕೆ.ಕಾಮರಾಜ್ ಅವರು ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಿ ಗೌರವಿಸಿದರು.
ಯಶೋಧ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಶಿಕ್ಷಕಿಯರಾದ ಶೃತಿ ದೊಡ್ಡಮನಿ, ಮಂಜುಶ್ರೀ ಅವರು, ತಲಾ 1 ಸಾವಿರ ರೂ.ಗಳನ್ನು ನೀಡಿ ಮಾನವೀಯತೆ ಮೆರೆದರು.
ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ವತಿಯಿಂದ 40 ಸಾವಿರ ರೂ.ಗಳ ಪ್ರೋತ್ಸಾಹ ಧನ ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣಕುಮಾರ್ ಹೆಗಡೆ ಅವರ ಶ್ರಮದಿಂದಾಗಿ ವಿದ್ಯಾರ್ಥಿನಿ ಯಶೋಧಳ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ದಾವಣಗೆರೆಯ ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜಿಗೆ ಜಮ ಆಗಿದೆ ಎಂದು ಶಿಕ್ಷಕಿ ಪರಿಮಳ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಆರ್.ಲೀಲಾವತಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಗ್ರಾಮದ ಸಂಘ-ಸಂಸ್ಥೆಗಳು ನೆರವು ನೀಡಬೇಕೆಂದು ಮನವಿ ಮಾಡಿದರು.
ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಕೆ.ಎನ್.ಚಿಕ್ಕಣ್ಣ ಮಾತನಾಡಿ, ಶಾಲೆಯ ಅಭಿವೃದ್ಧಿ ನಮ್ಮ ಸಂಘದಿಂದ ನೆರವು ನೀಡುವ ಬಗ್ಗೆ ಆಡಳಿತ ಮಂಡಳಿ ಜೊತೆ ಚರ್ಚಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಜಿಗಳಿ ಪ್ರಕಾಶ್ ಮಾತನಾಡಿ, ಇಂತಹ ಪ್ರತಿಭಾ ಪುರಸ್ಕಾರ ಪ್ರತಿಯೊಂದು ಶಾಲೆಯಲ್ಲೂ ನಡೆದರೆ ಅಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಕಾಮರಾಜ್ ಅವರನ್ನು ಅಭಿನಂದಿಸಿದರು.
ಕೆ.ಕಾಮರಾಜ್ ಮಾತನಾಡಿ, ಈ ಪ್ರತಿಭಾ ಪುರಸ್ಕಾರವನ್ನು ಪ್ರತಿವರ್ಷ ಮಾಡುವುದಾಗಿ ಪ್ರಕಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಕೆ.ಹೆಚ್.ಆನಂದ್ ಮಾತನಾಡಿ, ಶಾಲೆಗೆ ಕೊಠಡಿ ಗಳ ಅಗತ್ಯವಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಶಾಲೆ ಬಗ್ಗೆ ಗಮನ ಹರಿಸಬೇಕೆಂದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಶಿಲ್ಪಾ, ಶಿಕ್ಷಕಿಯರಾದ ಸಿದ್ದಲಿಂಗಮ್ಮ, ಜ್ಯೂಲಿಯಟ್ ಸಾವಿತ್ರಮ್ಮ ಈ ವೇಳೆ ಹಾಜರಿದ್ದರು.