ಮಲೇಬೆನ್ನೂರು : ವಿವಿಧೆಡೆ ಸಂಭ್ರಮದ ಶಾಲಾ ಪ್ರಾರಂಭೋತ್ಸವ

ಮಲೇಬೆನ್ನೂರು : ವಿವಿಧೆಡೆ ಸಂಭ್ರಮದ ಶಾಲಾ ಪ್ರಾರಂಭೋತ್ಸವ

ಮಲೇಬೆನ್ನೂರು, ಮೇ 31- ಶುಕ್ರವಾರ ಮಲೇಬೆ ನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.

ಶಾಲೆಗಳನ್ನು ಹಸಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಶಾಲೆಗೆ ಬಂದ ಮಕ್ಕಳಿಗೆ ಹೂವು ಮತ್ತು ಚಾಕೋಲೇಟ್ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇದೇ ದಿನ ಮಕ್ಕಳಿಗೆ ಸರ್ಕಾರ ನೀಡುವ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನೂ ಸಹ ವಿತರಿಸಲಾಯಿತು. ಶಾಲೆ ಆರಂಭದ ಮೊದಲ ದಿನವಾಗಿದ್ದರಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಹಜವಾಗಿಯೇ ಕಡಿಮೆ ಇತ್ತು.

ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ಸಂಭ್ರಮದಿಂದ ಕೂಡಿತ್ತು.

ಮಲೇಬೆನ್ನೂರು : ವಿವಿಧೆಡೆ ಸಂಭ್ರಮದ ಶಾಲಾ ಪ್ರಾರಂಭೋತ್ಸವ - Janathavani ಮಲೇಬೆನ್ನೂರು : ವಿವಿಧೆಡೆ ಸಂಭ್ರಮದ ಶಾಲಾ ಪ್ರಾರಂಭೋತ್ಸವ - Janathavani

ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರಾಚಾರಿ, ಪತ್ರಕರ್ತ ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರಾದ ಮಲ್ಲಿಕಾರ್ಜುನ್, ಲಿಂಗರಾಜ್, ಗುಡ್ಡಪ್ಪ, ಶ್ರೀನಿವಾಸ್ ರೆಡ್ಡಿ, ಜಯಶ್ರೀ, ಕರಿಬಸಮ್ಮ ಮತ್ತಿತರರು ಮಕ್ಕಳಿಗೆ ಹೂವು ಮತ್ತು ಚಾಕೋಲೇಟ್ ನೀಡಿ, ಶಾಲೆಗೆ ಬರಮಾಡಿಕೊಂಡರು. ನಂತರ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ, ಮಧ್ಯಾಹ್ನ ಸಿಹಿಯೂಟ ನೀಡಲಾಯಿತು.

ಮಲೇಬೆನ್ನೂರಿನ ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿ, ಸಿಹಿಯೂಟ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕಾರ್ಯ ದರ್ಶಿ ಹೆಚ್.ಜಿ.ಚಂದ್ರಶೇಖರ್, ನಿರ್ದೇಶಕ ಎಂ.ಆರ್.ಮಾರಪ್ಪ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಹೆಚ್.ಶಿವಕುಮಾರ್, ಕಾರ್ಯದರ್ಶಿ ಎಂ.ಕೆ.ಗಜೇಂದ್ರ ಸ್ವಾಮಿ, ಬಟ್ಟೆ ಅಂಗಡಿ ವಿಶ್ವ, ಎಸ್‌ಡಿಎಂಸಿ ಅಧ್ಯಕ್ಷ ಪಿ.ಆರ್.ಸನಾವುಲ್ಲಾ, ಪತ್ರಕರ್ತ ಜಿಗಳಿ ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಶಿಕ್ಷಕರಾದ ಯಂಕನಾಯ್ಕ, ಪ್ರೇಮ ಲೀಲಾ ಬಾಯಿ, ಜಿ.ಕೆ.ಬಸವರಾಜಪ್ಪ, ಹನುಮಂತಪ್ಪ, ಎಂ.ಕೆ.ಸುನೀಲ್ ಭಾಗವಹಿಸಿದ್ದರು.

ಡಿಡಿಪಿಐ  ಭೇಟಿ : ಪಟ್ಟಣದ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವದಲ್ಲಿ ಡಿಡಿಪಿಐ ಕೊಟ್ರೇಶ್ ಅವರು ಪಾಲ್ಗೊಂಡು ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್ ಹಾಗೂ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.

error: Content is protected !!