ವೃದ್ಧಾಶ್ರಮ : ವಿದ್ಯಾರ್ಥಿಗಳಿಂದ ಅರಿವು ಮೂಡಿಸುವ ಬೀದಿ ನಾಟಕ

ವೃದ್ಧಾಶ್ರಮ : ವಿದ್ಯಾರ್ಥಿಗಳಿಂದ ಅರಿವು ಮೂಡಿಸುವ ಬೀದಿ ನಾಟಕ

ದಾವಣಗೆರೆ, ಮೇ 31- ದವನ್‌ ಪದವಿ ಕಾಲೇಜಿನಿಂದ ನಡೆಯಲಿರುವ ಸ್ಫೂರ್ತಿ ಯುವ ಜನೋತ್ಸವದ ಅಂಗವಾಗಿ ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳು ನಗರದ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನದ ಮುಂದೆ ವೃದ್ಧಾಶ್ರಮದ ಬಗ್ಗೆ ಒಂದು ಕಿರು ನಾಟಕವನ್ನು ಪ್ರದರ್ಶಿಸಿದರು. 

ಶಾಲೆಯ ಹತ್ತಿರ ಬಿಟ್ಟು ಹೋಗುವಾಗ ನೀನು ನಿಮ್ಮ ತಂದೆ-ತಾಯಿಯನ್ನು ನೋಡುವ ರೀತಿ ವೃದ್ಧಾಶ್ರಮದಲ್ಲಿ ಬಿಟ್ಟು ಹೋಗುವಾಗ ನಿಮ್ಮ ತಾಯಿ-ತಂದೆ ನೋಡುವ ರೀತಿ ಒಂದೇ ಆಗಿರುತ್ತದೆ. ನಿನ್ನ ನೋವು ಶಾಲೆಯ ಗಂಟೆ ಹೊಡೆದ ನಂತರ ಮಾಯವಾಗುತ್ತದೆ. ಆದರೆ, ಅವರ ನೋವು ಹೃದಯ ನಿಲ್ಲುವವರೆಗೆ ಹೋಗುವುದಿಲ್ಲ. ಕಾರಣ, ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳಾದವರ ಧರ್ಮವಾಗಿದೆ. ವೃದ್ಧಾಶ್ರಮಕ್ಕೆ ಕಳುಹಿಸುವ ತಪ್ಪನ್ನು ಯಾರೂ ಮಾಡಬಾರದು.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವೃದ್ಧಾಶ್ರಮದ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಅರಿವು ಮೂಡಿಸಿದರು. 

ತರಗತಿ ಉಸ್ತುವಾರಿ ಎಂ.ಸಿ. ರೂಪಾ, ಬೀದಿ ನಾಟಕ ಸ್ಪರ್ಧೆಯ ಉಸ್ತುವಾರಿ ಅರುಣ್‌ ಚೌಹಾಣ್‌, ತೀರ್ಪುಗಾರರಾದ ತೃಪ್ತೆ ಜನ್ನು, ಕೆ.ಎಂ. ಅಶ್ವಿನಿ ಹಾಗೂ ಪ್ರಥಮ ಬಿ.ಕಾಂ. ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!