ಹರಪನಹಳ್ಳಿ ಸರ್ಕಾರಿ ಕನ್ನಡ-ಆಂಗ್ಲ ಮಾಧ್ಯಮ ಶಾಲೆ ಅದ್ಧೂರಿ ಆರಂಭ

ಹರಪನಹಳ್ಳಿ ಸರ್ಕಾರಿ ಕನ್ನಡ-ಆಂಗ್ಲ ಮಾಧ್ಯಮ ಶಾಲೆ ಅದ್ಧೂರಿ ಆರಂಭ

ಹರಪನಹಳ್ಳಿ, ಮೇ 31-  ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶಿಕ್ಷಣ ಇಲಾಖೆಯಿಂದ  ನೂತನವಾಗಿ ಪ್ರಾರಂಭ ಮಾಡಿರುವ ಎಲ್‌ಕೆಜಿ, ಯುಕೆಜಿ    ಮತ್ತು   1ನೇ ತರಗತಿ ಆಂಗ್ಲ ಮಾಧ್ಯಮ   ಮತ್ತು 1ರಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಒಳಗೊಂಡಂತೆ  ಇಂದು ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಮಾಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ  ಯು. ಬಸವರಾಜಪ್ಪ ಚಾಕೋಲೇಟ್‌  ವಿತರಿಸುವ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು  ಎಲ್‌ಕೆಜಿ 30, ಯುಕೆಜಿ 30 ಮತ್ತು 1ನೇ ತರಗತಿಗೆ 30 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬಡ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಇದು ಸಹಕಾರಿಯಾಗಿದೆ. ಈ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲು ಇಲಾಖೆ ಆದೇಶದಂತೆ ಆಂಗ್ಲ ಮಾಧ್ಯಮಕ್ಕೆ  3 ಜನ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷರಾದ ಎಂ. ರೇಖಾ, ಸದಸ್ಯರಾದ ಸತ್ಯಭೋದೆ, ಮುಖ್ಯಗುರುಗಳಾದ ಸಲೀಮ್ ಹೆಚ್, ಶಿಕ್ಷಕರಾದ ಎನ್‌.ಜಿ   ಚಿದಾನಂದಪ್ಪ, ಎಂ.ಶಿವಯೋಗಿ, ಅಜಯ್ ಎಸ್. ಗುಡುಗೂರು, ಎಂ. ಅಂಜಿನಪ್ಪ, ಮಂಜಪ್ಪ ಬಣಕಾರ್  ಮತ್ತು ಎಲ್ಲ ಶಿಕ್ಷಕರು ಹಾಜರಿದ್ದರು.  

error: Content is protected !!