ಸ್ಕೀಜೋಪ್ರೀನಿಯ ಮನೋರೋಗದ ಗಂಭೀರ ಮಾನಸಿಕ ಸ್ಥಿತಿ : ಭುವನೇಶ್ವರಿ

ಸ್ಕೀಜೋಪ್ರೀನಿಯ ಮನೋರೋಗದ  ಗಂಭೀರ ಮಾನಸಿಕ ಸ್ಥಿತಿ : ಭುವನೇಶ್ವರಿ

ಹರಪನಹಳ್ಳಿ, ಮೇ 29 – ಸ್ಕೀಜೋ ಪ್ರೀನಿಯ  ಮನೋರೋಗದ ಒಂದು ಗಂಭೀರವಾದ ಮಾನಸಿಕ ಸ್ಥಿತಿಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಜಿ. ಭುವನೇಶ್ವರಿ ಹೇಳಿದರು.

ಉಚ್ಚಂಗಿದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಕೀಜೋಪ್ರೀನಿಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಕೀಜೋಪ್ರೀನಿಯ ಪ್ರಭಾವ ಮನುಷ್ಯನ ಯೋಚನಾ ಲಹರಿ, ಅವನು ಅಥವಾ ಅವಳು ತನ್ನನ್ನು ತಾನು ವ್ಯಕ್ತಪಡಿಸುವ ರೀತಿ, ವಾಸ್ತವಿಕ ಅಂಶಗಳನ್ನು ಸ್ವೀಕರಿಸುವ ಬಗೆ ಹಾಗೂ ಅದನ್ನು ಇತರರೊಂದಿಗೆ ಯಾವ ರೀತಿ ಜೋಡಿಸಿ ನೋಡುವ ಬಗೆಗಳ ಮೇಲೆ ಹೆಚ್ಚಾಗಿ ಬೀರುತ್ತದೆ. ಹಾಗಾಗಿ ಇದೊಂದು ಮಾನಸಿಕ ಅಸ್ವಸ್ಥತೆ ಎಂದೇ ಹೇಳಬಹುದು.

ಲಕ್ಷಣಗಳೆಂದರೆ : ಮನಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿ ಅವರು ಸದಾಕಾಲ ಆತಂಕದಲ್ಲಿರುವಂತೆ, ತಮ್ಮನ್ನು ತಾವೇ ಕಳೆದುಕೊಂದಿರುವಂತೆ ಹಾಗೂ ನೈಜತೆಯಿಂದ ಬಲು ದೂರದಲ್ಲಿರುವಂತೆ ಕಂಡು ಬರುತ್ತಾರೆ, ವಾಸ್ತವ ಜಗತ್ತೇ ಮರೆತು ಹೋಗುತ್ತೆ, ಕಲ್ಪನಾ ಲೋಕದಲ್ಲಿ ಜಗತ್ತನ್ನೇ ಮರೆಯುತ್ತಾರೆ, ಅವರಿಗೆ ಎಲ್ಲವೂ ಕಲ್ಪನೆ  ಗೊಂದಲ, ಹಾಗೂ ವಿವಿಧ ಬಗೆಯ ಸದ್ದುಗಳಿಂದ ಕೂಡಿರುವ ಯಾವುದೋ ಭಿನ್ನ ಜಗತ್ತಿನಂತೆ ಭಾಸವಾಗುತ್ತೆ. ಅವರ ನಡವಳಿಕೆ, ಮಾತು, ವ್ಯವಹಾರ, ಇತರರಲ್ಲಿ ಗೊಂದಲ ಮತ್ತು ಸಾಕಷ್ಟು ಅಚ್ಚರಿ, ಆತಂಕಗಳನ್ನು ಉಂಟು ಮಾಡಿದರೂ ಆಶ್ಚರ್ಯವಿಲ್ಲ.

ಕೆಲವು ತೀವ್ರವಾದ ಲಕ್ಷಣಗಳು, ಕಲ್ಪನೆಗಳು : ಆ ವ್ಯಕ್ತಿಗೆ ವಾಸ್ತವ  ಅಂಶ ಗಳನ್ನು ಪರಿಚಯಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿರುವುದಿಲ್ಲ.

ಭ್ರಮೆಗಳು : ತನಗೆ ಯಾರೋ ಸ್ಪರ್ಶಸುತ್ತಿದ್ದಾರೆ ಅಥವಾ ಯಾರಾದ್ದೋ ಸದ್ದು ಕೇಳುತ್ತಿರುವ ಭ್ರಮೆಗಳು ಉಂಟಾಗುವುದು, ಯಾರೋ ಮಾತನಾಡಿದ ರೀತಿ, ಯಾವುದೋ ದೃಶ್ಯಾವಳಿ ಕಾಣುವುದು, ಯಾರದ್ದೇ ಉಪಸ್ಥಿತಿ ಇರುವಿಕೆಯನ್ನು ನೋಡುತ್ತಾರೆ.

ಭಾವನೆಗಳ ಕೊರತೆ : ಇವರಿಗೆ ಸಾಮಾನ್ಯ ಜನರಿಗಿರುವಂತೆ ಭಾವನೆಗಳನ್ನು ಸಂದರ್ಭಕ್ಕೆ ತಕ್ಕಂತೆ ವ್ಯಕ್ತಪಡಿಸುವುದಿಲ್ಲ.

ಏಕಾಂತತೆ : ಎಲ್ಲರೊಡನೆ ಬೆರೆಯದೇ ಏಕಾಂತತೆಯಲ್ಲೇ ಸದಾ ಕಾಲ ಆತಂಕದ ಛಾಯೆಯಲ್ಲಿ ಒಂದು ಮೂಲೆಯಲ್ಲಿ ಸುಮ್ಮನೆ ಇರುವುದು, ಸಾಧ್ಯತೆ ಇಲ್ಲದ ನಂಬಿಕೆ, ಸಂಶಯ ಈ ರೋಗದ ಲಕ್ಷಣಗಳು.

ಈ ಕಾಯಿಲೆಯು ಅನುವಂಶಿಯತೆಯಿಂ ದಲೂ ಬರಬಹುದು ಎಂದರು.

ಈ ಕಾರ್ಯಕ್ರಮದಲ್ಲಿ  ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಶಿವಕುಮಾರ್,  ಪ್ರಾಥಮಿಕ ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ,  ಕಾರ್ಯಕರ್ತೆ ಆಶಾ ಸೇರಿದಂತೆ ಇತರರು ಇದ್ದರು.

error: Content is protected !!