ಸ್ವ ಉದ್ಯೋಗ ರೂಪಿಸಿಕೊಂಡ ರೂಪಾಗೆ ಪ್ರಧಾನಿ ಮೋದಿಯಿಂದ ಪ್ರಶಂಸನಾ ಪತ್ರ

ಸ್ವ ಉದ್ಯೋಗ ರೂಪಿಸಿಕೊಂಡ ರೂಪಾಗೆ ಪ್ರಧಾನಿ ಮೋದಿಯಿಂದ ಪ್ರಶಂಸನಾ ಪತ್ರ

ಸ್ವ ಉದ್ಯೋಗ ರೂಪಿಸಿಕೊಂಡ ರೂಪಾಗೆ ಪ್ರಧಾನಿ ಮೋದಿಯಿಂದ ಪ್ರಶಂಸನಾ ಪತ್ರ - Janathavaniದಾವಣಗೆರೆ, ಮೇ 28- ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಎ. ರೂಪ ಎಂಬ ಗೃಹಿಣಿಯೊಬ್ಬರಿಗೆ  ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸನಾ ಪತ್ರವೊಂದನ್ನು ನೀಡಿ ಗೌರವಿಸಿದ್ದಾರೆ.

ದೊಡ್ಡಬಾತಿ ಸಮೃದ್ಧಿ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ಭಾಗ್ಯಲಕ್ಷ್ಮಿ ಸ್ವ ಸಹಾಯ ಗುಂಪಿನ ರೂಪಾ ಅವರು `ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಆರಂಭಿಸಿರುವ ಸ್ವ ಉದ್ಯೋಗ ಬೆಂಬಲಿಸಿ, ಪ್ರಧಾನ ಮಂತ್ರಿಗಳು ಈ ಪತ್ರ  ಬರೆದಿದ್ದಾರೆ.

2022ರ ಮೇ 10ರಂದು ರೂಪ ಅವರು ಸ್ವ ಉದ್ಯೋಗ ಆರಂಭಿಸಿದ್ದರು. ಮೊದಲ ವರ್ಷ ಮನೆಯಲ್ಲಿಯೇ ಆಹಾರೋತ್ಪನ್ನ ತಯಾರಿಸುತ್ತಿದ್ದ ಅವರು, ನಂತರ ದೊಡ್ಡಬಾತಿ ರಸ್ತೆಯ ಮಳಿಗೆಯಲ್ಲಿ ಅಂಗಡಿ ಆರಂಭಿಸಿ ಮಾರಾಟ ಆರಂಭಿಸಿದ್ದರು.

ರೊಟ್ಟಿ, ಚಟ್ನಿ ಪುಡಿ, ಹಪ್ಪಳ, ಉಪ್ಪಿನಕಾಯಿ ಮೊದಲಾದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ರೂಪ ಇದೀಗ ಐವರಿಗೆ ಉದ್ಯೋಗ ನೀಡಿದ್ದಾರೆ. ಪ್ರತಿ ತಿಂಗಳಿಗೆ ಸುಮಾರು ಒಂದೂವರೆ ಲಕ್ಷದಷ್ಟು ವ್ಯಾಪಾರವಾಗಿ 30 ರಿಂದ 40 ಸಾವಿರ ರೂ. ಉಳಿ ತಾಯವಾಗುತ್ತದೆ ಎಂದು ರೂಪ ಪತ್ರಿಕೆಯೊಂದಿಗೆ ತಮ್ಮ ಯಶೋಗಾಥೆ ವಿವರಿಸಿದರು.

ಹರ್ಷ: ಪ್ರಧಾನ ಮಂತ್ರಿಗಳು ನಮ್ಮಂತಹ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಸಾಲದ ರೂಪದಲ್ಲಿ ಸಹಾಯ ಮಾಡಿ, ಅಭಿನಂದಾ ಪತ್ರ ಕಳುಹಿಸುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಖುಷಿ ತಂದಿದೆ ಎಂದು ರೂಪ ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.

ಮಾರುಕಟ್ಟೆ ಸಮಸ್ಯೆ: ನಾವು ಎಷ್ಟು ಬೇಕಾದರೂ ಆಹಾರ ಖಾದ್ಯಗಳನ್ನು ತಯಾರಿಸಲು ಸಿದ್ಧರಿದ್ದೇವೆ. ಆದರೆ ಮಾರುಕಟ್ಟೆ ಸಮಸ್ಯೆ ಇದೆ. ತಯಾರಿಸಿದ ಖಾದ್ಯ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೂಪ ನಿರಾಸೆ ವ್ಯಕ್ತಪಡಿಸಿದರು.

ಸ್ವಸಹಾಯ ಸಂಘಗಳಿಗೆ ನೆರವು ನೀಡುವ ಬಗ್ಗೆ ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ಮಾರುಕಟ್ಟೆ ಕಲ್ಪಿಸಿ ಕೊಡುವುದಿಲ್ಲ. ಸ್ವಾವಲಂಬಿಯಾಗಲು ಹೊರಟ ಪ್ರತಿ ಮಹಿಳೆಯರ ಸಮಸ್ಯೆಯೂ ಇದಾಗಿದೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುವಂತೆ ಅವರು ಮನವಿ ಮಾಡಿದರು.

error: Content is protected !!