ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಆವರಗೊಳ್ಳದ ಶ್ರೀಗಳು
ರಾಣೇಬೆನ್ನೂರು, ಮೇ 28 – ಶಿಸ್ತು, ಶ್ರದ್ಧೆ ಹಾಗೂ ಗುರುಗಳಲ್ಲಿ ನಂಬಿಕೆ, ನಿಷ್ಠೆ ಇದ್ದರೆ ವಿದ್ಯೆ ಒಲಿಯಲಿದೆ. ವಿದ್ಯಾರ್ಥಿಗಳು ಈ ಎಲ್ಲವು ಗಳನ್ನು ಮೈಗೂಡಿಸಿಕೊಂಡು ತಮ್ಮ ಮುಂದಿನ ಬದುಕನ್ನೂ ಬಂಗಾರವಾಗಿಸಿಕೊಳ್ಳಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಶ್ರೀಗಳು ಇಲ್ಲಿನ ಪಟ್ಟಣಶೆಟ್ಟಿ ಓಣಿಯ ಆವರಗೊಳ್ಳ ಗುರು ಕಾರುಣ್ಯ ಮಂದಿರದಲ್ಲಿ ದಾವಣಗೆರೆ ಮಿರಾಕಲ್ ಸಂಸ್ಥೆ ಎರಡು ತಿಂಗಳು ಇಲ್ಲಿ ನಡೆಸಿದ ಬೇಸಿಗೆ ಶಿಬಿರಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕಸಾಪ ಮಾಜಿ ಅದ್ಯಕ್ಷ ಜಿ.ಬಿ. ಮಾಸಣಗಿ, ಇಸಿಓ ಡಿ.ಬಿ. ಸುನೀತಾ, ಇಂದಿರಾಗಾಂಧಿ ವಸತಿ ಶಾಲೆಯ ಮಂಜುನಾಥ ಬುಕ್ಕಶೆಟ್ಟರ, ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭು ಎರೇಶೀಮಿ ಅವರು ಎಸ್ಎಸ್ಎಲ್ ಸಿ ಪೂರ್ವಭಾವಿ ಬೋಧನೆಯ ತರಬೇತಿ ನೀಡಿದರು.
ಪ್ರಾಚಾರ್ಯ ರುದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸವಿತಾ ಲಮಾಣಿ, ವೀಣಾ ಲಮಾಣಿ, ಮಾಲತೇಶ ಗರಡಿಮನಿ, ಮಲ್ಲಿಕಾರ್ಜುನ ಹೊರಕೇರಿ, ಪ್ರಕಾಶ ಶಿವಪುತ್ರಪ್ಪ, ಬನಶಂಕರಿ ಶಿಕ್ಷಣ ಸಂಸ್ಥೆಯ ವೀರೇಶ ಬಣಕಾರ, ಪ್ರಕೃತಿ ಕಲ್ಲಪ್ಪಗೌಡ್ರ, ಶಿವಾನಂದ ಬುಳ್ಳಮ್ಮನವರ ಮತ್ತಿತರರಿದ್ದರು.