ಎ.ವಿ.ಕೆ ಕಾಲೇಜಿನ ರೆಂಜರ್ಸ್ ವಿದ್ಯಾರ್ಥಿನಿಯರಿಗೆ ದೀಕ್ಷೆ

ಎ.ವಿ.ಕೆ ಕಾಲೇಜಿನ ರೆಂಜರ್ಸ್ ವಿದ್ಯಾರ್ಥಿನಿಯರಿಗೆ ದೀಕ್ಷೆ

ದಾವಣಗೆರೆ,ಮೇ 27-  ನಗರದ ಎ.ವಿ.ಕೆ ಪದವಿ ಮತ್ತು ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿಯರಿಗೆ ರೇಂಜರ್ಸ್ ಘಟಕ-01 ಮತ್ತು ಘಟಕ-02ರ ವತಿಯಿಂದ ದೀಕ್ಷಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.  

`ನಾನು ದೇವರಿಗೆ ಮತ್ತು ನನ್ನ ದೇಶಕ್ಕೆ ನನ್ನ ಕರ್ತವ್ಯ ಮಾಡಲು, ಇತರರಿಗೆ ಸಹಾಯ ಮಾಡಲು ಹಾಗೂ ಗೈಡ್ ನಿಯಮವನ್ನು ಪಾಲಿಸಲು ನನ್ನ ಕೈಲಾದ ಮಟ್ಟಿಗೆ ಪ್ರಯತ್ನ ಮಾಡುತ್ತೇನೆಂದು ನನ್ನ ಗೌರವ ಸಾಕ್ಷಿಯಾಗಿ ಪ್ರತಿಜ್ಞೆ ಮಾಡುತ್ತೇನೆ’ ಎಂದು ಎಲ್ಲಾ ರೇಂಜರ್ಸ್‍ಗಳು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು ಮತ್ತು ಕೆಂಪು ಬ್ಯಾಡ್ಜ್‍ನ್ನು ಪಡೆಯುವುದರ  ಮೂಲಕ ದೀಕ್ಷೆ ಪಡೆದರು. 

ತದನಂತರ ಪ್ರವೇಶ ಪರೀಕ್ಷೆಯ ಅಭಿನಂದನಾ ಪತ್ರವನ್ನು ಎಲ್ಲಾ ರೇಂಜರ್ಸ್ ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರಾದ ಶ್ರೀಮತಿ ಅಶ್ವಿನಿ,  ಮುಖ್ಯ ಅತಿಥಿಗಳಾಗಿ  ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಶಾರದಾ ಮಾಗಾನಹಳ್ಳಿ ಮತ್ತು ರೇಂಜರ್ ಲೀಡರ್ ಮತ್ತು ಸಹ ಪ್ರಾಧ್ಯಾಪಕರು ಸ.ಪ್ರ.ದ ಮಹಿಳಾ ಕಾಲೇಜಿನ ಡಾ. ಸಿದ್ದಲಿಂಗಮ್ಮ ಬಿ.ಜಿ,  ಪ್ರಾಚಾರ್ಯರಾದ ಪ್ರೊ. ಕಮಲಾ ಸೊಪ್ಪಿನ್, ಐಕ್ಯೂಎಸಿ ಸಂಚಾಲಕರಾದ ಪ್ರೊ. ಆರ್.ಆರ್ ಶಿವಕುಮಾರ್, ಪ್ರೊ. ಪ್ರಭಾವತಿ ಎಸ್. ಹೊರಡಿ ಹಾಗೂ ಇತರೆ ಬೋಧಕ ವರ್ಗದವರು ಪಾಲ್ಗೊಂಡಿದ್ದರು. 

ಕಾರ್ಯಕ್ರಮದ ಸಂಯೋಜಕರಾಗಿ ಘಟಕ -01 ರಿಂದ ಶ್ರೀಮತಿ ಎಲ್. ಉಷಾ ಮತ್ತು ಘಟಕ-02ರಿಂದ ಶ್ರೀಮತಿ ಎಂ.ಪಿ. ಜೀವಿತಾ ಮತ್ತು ಪದವಿ ಪೂರ್ವ ವಿಭಾಗದಿಂದ ಶ್ರೀಮತಿ ಟಿ. ಮಂಜುಳಾ ಅವರುಗಳು ಪಾಲ್ಗೊಂಡಿದ್ದರು.

error: Content is protected !!