ದಾವಣಗೆರೆ, ಮೇ 27- ಕೊಪ್ಪಳದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಕ್ಲಾಸಿಕ್ ತಂಡ ಪ್ರಶಸ್ತಿ ಪಡೆದುಕೊಂಡಿದೆ. ತಂಡದ ಆಟಗಾರರಾದ ಟಿ. ಕುಮಾರಸ್ವಾಮಿ, ಮಧುಸೂದನ್, ಮಂಜುನಾಥ್, ಚಂದ್ರಶೇಖರ್, ಬಸವರಾಜ್, ಅರುಣ್ ರಾಯ್ಕರ್, ಶಿವಕುಮಾರ್ ಉತ್ತಮ ಆಟ ಆಡಿ ತಂಡಕ್ಕೆ ಟ್ರೋಫಿ ತಂದು ಕೊಟ್ಟಿದ್ದಾರೆ. ಈ ತಂಡಕ್ಕೆ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪದಾಧಿಕಾರಿಗಳು, ಹಿರಿಯ ಆಟಗಾರರು ಅಭಿನಂದಿಸಿದ್ದಾರೆ.
January 10, 2025