ಸಂಸ್ಕಾರವಂತ ಮಕ್ಕಳೇ ಮುಂದೆ ಸತ್ಪ್ರಜೆಗಳು

ಸಂಸ್ಕಾರವಂತ ಮಕ್ಕಳೇ ಮುಂದೆ ಸತ್ಪ್ರಜೆಗಳು

ವಿಪ್ರ ವಟುಗಳ ವೇದ, ಪುರುಷಸೂಕ್ತ ಸಮಾರೋಪದಲ್ಲಿ ಡಾ. ಎಂ.ಸಿ. ಶಶಿಕಾಂತ್‌

ದಾವಣಗೆರೆ, ಮೇ 27 – ಬ್ರಾಹ್ಮಣ ಸಮಾಜ ಸೇವಾ ಸಂಘದ ವಿಪ್ರ ವಟು ಶಿಕ್ಷಣ ಸಮಿತಿ ವತಿಯಿಂದ ಈಚೆಗೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಹತ್ತು ದಿನಗಳ ಕಾಲ ವಟುಗಳಿಗೆ ಹಮ್ಮಿಕೊಂಡಿದ್ದ ವೇದ, ಪುರುಷಸೂಕ್ತ, ವಿಷ್ಣುಸಹಸ್ರನಾಮ, ಭಗವದ್ಗೀತೆ, ಶಾಂತಿ ಮಂತ್ರಗಳು ಹಾಗೂ ಸಂಧ್ಯಾವಂದನೆ ಕ್ರಮ ಸಮಾಪನೆಗೊಂಡಿತು.

ಶಂಕರ ನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಶಿಬಿರಾರ್ಥಿಗಳು ದಾವಣಗೆರೆ, ಮುರುಡೇಶ್ವರ, ತುಮಕೂರು, ಬೇಲೂರು, ಶಿವಮೊಗ್ಗ ಮೊದಲಾದ ಕಡೆಯಿಂದ ಆಗಮಿಸಿ ಅತ್ಯಂತ ಉತ್ಸಾಹದಿಂದ  ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಸಿ.  ಶಶಿಕಾಂತ್ ಮಾತನಾಡಿ, ಶಾಲಾ ಪಾಠಗಳಷ್ಟೇ ಅಲ್ಲದೆ ಅಧ್ಯಾತ್ಮಿಕ ವಿದ್ಯೆಯೂ ಮುಖ್ಯ. ಸಂಸ್ಕಾರವಂತ ಮಕ್ಕಳೇ ಮುಂದೆ ಸತ್ಪ್ರಜೆಗಳಾಗುವವರು ಎಂದು ತಿಳಿಸಿದರು.

ಆಚಾರ್ಯತ್ರಯರ ಅಥವಾ ಯಾವುದೇ ಗುರುಗಳ ನಿಂದನೆ ಮಾಡಬಾರದು. ಎಲ್ಲಾ ಗುರುಗಳನ್ನೂ ಗೌರವದಿಂದ ಕಾಣಬೇಕು. ಒಗ್ಗಟ್ಟು ಬಹಳ ಮುಖ್ಯ ಎಂದು ತಿಳಿಸಿದರು.

ಶಂಕರ ನಾರಾಯಣ ಶಾಸ್ತ್ರಿ, ವೈದ್ಯ ಡಾ. ಎಸ್.ಆರ್. ಹೆಗಡೆ, ವಿಪ್ರವಟು ಶಿಕ್ಷಣ ಸಮಿತಿಯ ಅಧ್ಯಕ್ಷ ವಿನಾಯಕ ಡಿ. ಜೋಷಿ, ಬಿ.ಟಿ. ಅಚ್ಚ್ಯುತ್, ಗಿರೀಶ್ ನಾಡಿಗ್, ಮೋತಿ ಆರ್. ಸುಬ್ರಮಣ್ಯ, ಬಾಲಕೃಷ್ಣ ವೈದ್ಯ, ಸತ್ಯನಾರಾಯಣರಾವ್, ಮೋಹನ್ ದೀಕ್ಷಿತ್, ಭಾಸ್ಕರ್ ಭಟ್, ಆನಂದಮೂರ್ತಿ, ಗೋಪಾಲರಾವ್ ಉಪಸ್ಥಿತರಿದ್ದರು. 

ರಾಮಚಂದ್ರರಾವ್ ಸ್ವಾಗತಿಸಿದರು, ಡಿ.ಕೆ.ಎಸ್. ಮೂರ್ತಿ ವಂದಿಸಿದರು, ಗೋಪಾಲದಾಸ್  ನಿರೂಪಿಸಿದರು.

error: Content is protected !!