ಚನ್ನಗಿರಿ : ‘ಕಬ್ಬಳ ಕ್ರಿಕೆಟ್ ಹಬ್ಬ ಸೀಸನ್-10’ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ಚಾಂಪಿಯನ್

ಚನ್ನಗಿರಿ : ‘ಕಬ್ಬಳ ಕ್ರಿಕೆಟ್ ಹಬ್ಬ ಸೀಸನ್-10’ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ಚಾಂಪಿಯನ್

ಚನ್ನಗಿರಿ, ಮೇ 27 – ತಾಲ್ಲೂಕಿನ ಕಬ್ಬಳ ಗ್ರಾಮದ ಕೆ.ಸಿ. ಹೆಚ್ ಕಮಿಟಿ ವತಿಯಿಂದ ‘ಕಬ್ಬಳ ಕ್ರಿಕೆಟ್ ಹಬ್ಬ ಸೀಸನ್-10’ ಆಯೋಜಿಸಿತ್ತು. ಮೂರು ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಒಟ್ಟು 7 ತಂಡಗಳು ಪಾಲ್ಗೊಂಡಿದ್ದವು. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಕಬ್ಬಳ ಸ್ಟೈಕರ್ಸ್ ಹಾಗೂ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡಗಳು ಫೈನಲ್‌ಗೇರಿದ್ದವು.

ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಬ್ಬಳ ಸ್ಟೈಕರ್ಸ್ ತಂಡ 5 ಓವರ್‌ಗಳಲ್ಲಿ 37 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನು ಹತ್ತಿದ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ಕೇವಲ 4.2 ಓವರ್‌ಗಳಲ್ಲಿ ಜಯದ ನಗೆ ಬೀರಿತು. ಅಲ್ಲದೇ, ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಕುಣಿದು ಕುಪ್ಪಳಿಸಿತು. ತಾಲ್ಲೂಕು ಮಟ್ಟಿಗೆ ಇಂಥ ಕ್ರಿಕೆಟ್ ಪಂದ್ಯಾವಳಿ ಪ್ರಥಮ. ಪಂದ್ಯದ ಕೊನೆಯ ಓವರ್‌ನಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಆಟಗಾರ ರಾಕೇಶ್ ಉತ್ತಮ ಆಟ ಪ್ರದರ್ಶಿಸಿ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖಂಡರಾದ ಲಕ್ಷ್ಮಣ ನಾಯ್ಕ್, ಪ್ರಕಾಶ್ ನಾಯ್ಕ್  ಹಿರಿಯ ಆಟಗಾರರಾದ ಲೋಕೇಶ ಕೆ.ಸಿ, ಚೇತನ್ ದಾಗಿ, ಅವಿನಾಶ್ ಗೌಡ, ಸುಪ್ರೀತ್, ರೈತ ಸಂಘದ ಸಂತೋಷ್ ನಾಯ್ಕ್, ಹರೀಶ್ ಕೆ.ಬಿ, ಪುನೀತ್ ಎಲ್ಲಾ ತಂಡಗಳ ಆಟಗಾರರು ಹಾಗೂ ಕ್ರೀಡಾ ಪ್ರೇಮಿಗಳು ಸೇರಿದಂತೆ ಇತರರು ಇದ್ದರು. 

error: Content is protected !!