ಸಿದ್ಧಗಂಗಾ ಸಂಸ್ಥೆಯ ಭೂಮಿಕಾ ಮುತ್ತಗಿಗೆ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ಸನ್ಮಾನ

ಸಿದ್ಧಗಂಗಾ ಸಂಸ್ಥೆಯ ಭೂಮಿಕಾ ಮುತ್ತಗಿಗೆ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ಸನ್ಮಾನ

ದಾವಣಗೆರೆ, ಮೇ 27- ಎಸ್ಸೆಸ್ಸೆಲ್ಸಿಯಲ್ಲಿ 620 ಕ್ಕಿಂತ ಹೆಚ್ಚು ಮತ್ತು ವಿಜ್ಞಾನದಲ್ಲಿ 100ಕ್ಕೆ 100 ಅಂಕಗಳಿಸಿದ ಪರಿಶಿಷ್ಟ ವರ್ಗದ ಮಕ್ಕಳಿಗೆ ಡಾ. ಬಿ.ಆರ್.‌ಅಂಬೇಡ್ಕರ್‌ ಜಯಂತಿಯಂದು ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಸಚಿವಾಲಯದ ವತಿಯಿಂದ ಬೆಂಗಳೂರಿನ ಸಿ.ಎಸ್‌.ಐ.ಆರ್.‌ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋಲೇಟರಿಸ್‌ನಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು.

ನಗರದ ಸಿದ್ಧಗಂಗಾ ಪ್ರೌಢಶಾಲೆಯ ಭೂಮಿಕಾ ಬಸವರಾಜ ಮುತ್ತಗಿ ಈ ಸನ್ಮಾನ ಸ್ವೀಕರಿಸಿದರು. ಸನ್ಮಾನಿತರಿಗೆ ಐದು ಸಾವಿರ ನಗದು ಬಹುಮಾನ ಜೊತೆಗೆ ಸಿ.ಎಸ್.ಆರ್.ಪಿ. ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಂತ್ರಜ್ಞಾನದ ಎಲ್ಲಾ ವಿಭಾಗಗಳಿಗೆ ಭೇಟಿ ಕೊಡುವ ಅವಕಾಶ. ಆ ಮೂಲಕ ಪ್ರತಿಭಾವಂತ ಮಕ್ಕಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ವಿಕಸನದ ಬಗ್ಗೆ ತಿಳುವಳಿಕೆ ಹಾಗೂ ಆಸಕ್ತಿ ಮೂಡಿಸುವ ಎರಡು ದಿನಗಳ ವೀಕ್ಷಣಾ ಕಾರ್ಯಕ್ರಮ ಮತ್ತು ವಿಜ್ಞಾನಿಗಳನ್ನು ಭೇಟಿಯಾಗುವ ಅವಕಾಶ ಕಲ್ಪಿಸಿಕೊಡಲಾಯಿತು. 

error: Content is protected !!