ದಾವಣಗೆರೆ, ಮೇ 26- ಆಂಗ್ಲಮಯ ಹಾಗೂ ಕಾನೂನು ಬಾಹಿರ ಫ್ಲೆಕ್ಸ್‌ಗಳಿಗೆ ಪರವಾನಗಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಕರುನಾಡ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಟಿ ಗೋಪಾಲ ಗೌಡ್ರು ಎಚ್ಚರಿಕೆ ನೀಡಿದ್ದಾರೆ.
ನಾಮಫಲಕ ಹಾಗೂ ಜಾಹಿರಾತು ಫಲಕಗಳಲ್ಲಿ ಶೇ.60ರಷ್ಟು ಕಡ್ಡಾಯ ಕನ್ನಡ ಬಳಕೆ ಆದೇಶ ಉಲ್ಲಂ ಘಿಸಿ, ಆಂಗ್ಲ ಪ್ಲೆಕ್ಸ್‌ಗಳಿಗೆ ಪಾಲಿಕೆಯು ಅಕ್ರಮವಾಗಿ ಪರವಾನಗಿ ನೀಡಿದೆ ಎಂದು ಆರೋಪಿಸಿದರು.
ಒಂದಕ್ಷರವೂ ಕನ್ನಡ ಬಳಕೆ ಮಾಡದ ಪ್ಲೆಕ್ಸ್ ಅಳವಡಿಕೆಗೆ ಪರವಾನಿಗೆ ನೀಡಿದ ಪಾಲಿಕೆಯು, ಆಯುಕ್ತರ ಹಾಗೂ ಅಧಿಕಾರಿಗಳ ಕನ್ನಡ ವಿರೋಧಿತನಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ನಗರದಲ್ಲಿ ಸಾಕಷ್ಟು ಕಾನೂನು ಬಾಹಿರ ಹಾಗೂ ಅವಧಿ ಮೀರಿದ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ವಿದ್ಯುತ್ ಹಾಗೂ ಟ್ರಾಫಿಕ್ ಸಿಗ್ನಲ್ ಕಂಬಗಳ ಮೇಲೆ ಕಟ್ಟಿದ ಫ್ಲೆಕ್ಸ್ ಬೋರ್ಡ್‌ಗಳು ಗಾಳಿ-ಮಳೆಯಿಂದಾಗಿ ವಿದ್ಯುತ್ ಅವಗಢ ಮಾಡಲಿವೆ. ಆದ್ದರಿಂದ ಆಯುಕ್ತರು ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.