ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಗಾನವಿ ಪ್ರಥಮ

ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಗಾನವಿ ಪ್ರಥಮ

ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್‌ನಿಂದ ಸನ್ಮಾನ

ದಾವಣಗೆರೆ, ಮೇ 26- ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುವ ನಗರದ ಸಿದ್ಧಗಂಗಾ ಪ್ರೌಢಶಾಲೆಯ  ವಿದ್ಯಾರ್ಥಿನಿ ಕು. ಹೆಚ್.ಜಿ. ಗಾನವಿ ಅವರನ್ನು ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್‌ ವತಿಯಿಂದ   ಗೌರವಿಸಲಾಯಿತು.

ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಅವರು ಗಾನವಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆಯೊಂದಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುರುಗೇಶ್, ಮಕ್ಕಳು ಓದಿನಲ್ಲಿ ಯಶಸ್ಸು ಗಳಿಸಬೇಕು, ಉತ್ತಮ ಅಂಕ ತೆಗೆಯಬೇಕು ಎಂಬ ಆಸೆ ಪ್ರತಿ ಪೋಷಕರಲ್ಲೂ ಇರುವುದು ಸಹಜ. ಯಶಸ್ವಿ ಮಕ್ಕಳು ಅನುಸರಿಸುವ ಕ್ರಮ ವನ್ನು ಪೋಷಕರು ತಿಳಿದುಕೊಂಡು ಅದಕ್ಕೆ ಪ್ರೋತ್ಸಾಹ ನೀಡುವುದು ಮುಖ್ಯವಾಗುತ್ತದೆ. ಗಾನವಿ ಬೇರೆ ಮಕ್ಕಳಿಗೂ ಸ್ಫೂರ್ತಿಯಾಗಿದ್ದು, ನಗರಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ಗಾನವಿ ಜೆ.ಹೆಚ್. ಪಟೇಲ್ ಬಡಾವಣೆಯ ಹೆಚ್.ಎನ್. ಗಿರೀಶ್ ಮತ್ತು ಶ್ರೀಮತಿ ಜ್ಯೋತಿ ದಂಪತಿ ಪುತ್ರಿ.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಪರಶುರಾಮಪ್ಪ, ವ್ಯವಸ್ಥಾಪನಾ ಮಂಡಲಿಯ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕ ಎ.ಹೆಚ್. ಕುಬೇರಪ್ಪ, ನಿರ್ದೇಶಕರುಗಳಾದ  ಕಿರುವಾಡಿ ವಿ. ಸೋಮಶೇಖರ್‌,  ಶಂಕರ್ ಖಟಾವ್‌ಕರ್, ಎಸ್.ಕೆ. ಪ್ರಭು ಪ್ರಸಾದ್,  ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ. ನಾಗೇಂದ್ರಚಾರಿ, ಬಿ. ಚಿದಾನಂದಪ್ಪ, ಎ. ಕೊಟ್ರೇಶ್, ಶ್ರೀಮತಿ ಉಮಾ ವಾಗೀಶ್,  ವಿಶಾಲ್‌ ಕುಮಾರ್ ಆರ್. ಸಂಘವಿ, ಶ್ರೀಮತಿ ಅನಿತಾ ಕೋಗುಂಡಿ ಪ್ರಕಾಶ್, ಶ್ರೀಮತಿ ಅನೂಪ ಡಾ|| ವೀರೇಂದ್ರಸ್ವಾಮಿ, ವೃತ್ತಿಪರ ನಿರ್ದೇಶಕರಾದ  ಆರ್.ವಿ. ಶಿರಸಾಲಿಮಠ,  ಕಿರಣ್ ಶೆಟ್ಟಿ ಮತ್ತು ವ್ಯವಸ್ಥಾಪನಾ ಮಂಡಲಿಯ ಸದಸ್ಯರಾದ ಕೆ.ಎಂ. ಬಸವರಾಜ್, ಶ್ರೀಮತಿ ಜಿ.ಸಿ. ವಸುಂಧರ, ಶ್ರೀಮತಿ ಶೈಲಾ ಹಾಲಸ್ವಾಮಿ ಕಂಬಳಿ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎನ್. ತುಳಸಿನಾಥ್, ಉಪ ಪ್ರಧಾನ ವ್ಯವಸ್ಥಾಪಕರಾದ  ಕೆ.ಎಂ. ರುದ್ರಮುನಿ ಮತ್ತು ಕೆ.ಎಂ. ನಟರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!