ಗಾಂಧೀ ಭವನದಲ್ಲಿ ಚಿಂತನಾಗೋಷ್ಠಿ

ಗಾಂಧೀ ಭವನದಲ್ಲಿ ಚಿಂತನಾಗೋಷ್ಠಿ

ದಾವಣಗೆರೆ, ಮೇ 24- ಕರ್ನಾಟಕ ಸಾಂಸ್ಕೃತಿಕ ಅಭಿವೃದ್ಧಿ ಪರಿಷತ್ ಹಾಗೂ ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ವತಿಯಿಂದ ನಗರದ ಗಾಂಧೀ ಭವನದಲ್ಲಿ ಗುರುವಾರ ಚಿಂತನಾ ಗೋಷ್ಠಿ ಹಾಗೂ ಕವಿಗೋಷ್ಠಿ ಯಶಸ್ವಿಯಾಗಿ ನಡೆಯಿತು.

ಬುದ್ಧ ವಾಸ್ತವಿಕ ನೆಲೆಗಟ್ಟಿನಲ್ಲಿ ಮಾರ್ಗದರ್ಶನ ನೀಡಿದ ಮಹಾನ್ ಚೇತನ ಹಾಗೂ ಆಸೆಯೇ ದುಃಖಕ್ಕೆ ಮೂಲ ಎಂದು ತಿಳಿಸಿದ ದಾರ್ಶನಿಕ ಎಂದು ಅಖಿಲ ಭಾರತ ಬೌದ್ಧ ಮಹಾಸಭಾದ ಸದಸ್ಯರಾದ ಕತ್ತಲಗೆರೆ ತಿಪ್ಪಣ್ಣ ಹೇಳಿದರು.

ಆವರಗೆರೆ ರುದ್ರಮುನಿ, ಶಿವಯೋಗಿ ಹಿರೇಮಠ, ಶಿವ ಕುಮಾರ್‌, ಶಿಕ್ಷಕ ವಿಜಯೇಂದ್ರ, ರಾಜಶೇಖರ್, ನಾಗರಾಜ್, ಜಯರಾಮನ್, ಉಮಾದೇವಿ ಹಿರೇಮಠ, ಸುಶೀಲಮ್ಮ, ತಾಜುದ್ದೀನ್, ಮಹಾಂತೇಶ್ ನಿಟ್ಟೂರು, ಕಡ್ಲೆಬಾಳು ಪ್ರಕಾಶ್, ವಿಶ್ವ ಮಾನವ ಮಂಟಪ ಮತ್ತು ಗಾಂಧಿ ಗ್ರಾಮ ಸೇವಾಶ್ರಮ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

error: Content is protected !!