ದಾವಣಗೆರೆ, ಮೇ 24 – ನಗರದ ಬಿಜೆಪಿ ಸಕ್ರಿಯ ಕಾರ್ಯ ಕರ್ತ ಶಾಂತಿನಗರದ ಹುಚ್ಚೆಂಗಪ್ಪ ಪಾರ್ಶ್ವವಾಯು ಗೊಳಗಾಗಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಗಾಯತ್ರಿ ಸಿದ್ದೇಶ್ವರ ಅವರ ಸೂಚನೆಯಂತೆ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದಿಂದ ಹುಚ್ಚೆಂಗಪ್ಪ ಅವರಿಗೆ 5,100 ರೂ. ಧನ ಸಹಾಯ ಮಾಡಿ, ಬೇಗ ಗುಣಮುಖರಾಗುವಂತೆ ಹಾರೈಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಆವರಗೊಳ್ಳದ ಬಿ.ಎಂ. ಷಣ್ಮುಖಯ್ಯ, ಯಲ್ಲಮ್ಮ ನಗರದ ಮಲ್ಲೇಶರಾವ್, ಅಂಟೋನಿ, ಅರುಣ ನಾಯಕ್, ಚಂದ್ರನಾಯ್ಕ, ಎಂ.ಪಿ. ಕೃಷ್ಣಮೂರ್ತಿ ಪವಾರ್ ಇದ್ದರು.
December 28, 2024