ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಎನ್‌ಎಸ್‌ಯುಐ ಆಗ್ರಹ

ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಎನ್‌ಎಸ್‌ಯುಐ ಆಗ್ರಹ

ಹರಪನಹಳ್ಳಿ, ಮೇ 24- ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೇಷನ್ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯ ನಿಯಮ ಉಲ್ಲಂಘಸಿ, ಮನಸೋ ಇಚ್ಛೆಯಿಂದ ಅಕ್ರಮವಾಗಿ ಡೊನೇಷನ್ ವಸೂಲಿ ಮಾಡುತ್ತಿರು ವುದು ಸರಿಯಲ್ಲವೆಂದು ಸಂಘ ಟನೆಯ ಕಾರ್ಯಕರ್ತರು ದೂರಿದರು.

ಎಲ್‌ಕೆಜಿ, ಯುಕೆಜಿ ಹಾಗೂ ಪಿಯು ಮಕ್ಕಳಿಂದ 10 ರಿಂದ 35 ಸಾವಿರ ವರೆಗೆ ಡೊನೇಷನ್‌ ಸ್ವೀಕರಿಸುವುದನ್ನು ಎನ್‌ಎಸ್‌ಯುಐ ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೂಡಲೇ ಡೋನೇಷನ್ ನಿಯಂತ್ರಣಕ್ಕಾಗಿ ಇರುವ ಡಿಇಆರ್‌ಎ ಸಮಿತಿಯಿಂದ ಸಭೆ ಕರೆದು, ಎಲ್ಲ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿ, ವಿದ್ಯಾರ್ಥಿ ಸಂಘಟನೆ ಮತ್ತು ಶಿಕ್ಷಣ ತಜ್ಞರ ಸಮ್ಮುಖದಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಖಾಸಗಿ ಶಾಲೆಗಳಲ್ಲಿ ಖಾಲಿ ಇರುವ ಸೀಟು ಮತ್ತು ಶುಲ್ಕದ ಮಾಹಿತಿ ಸೂಚನಾ ಫಲಕದಲ್ಲಿ ಪ್ರಕಟಿಸುವುದು, ಸರ್ಕಾರದಿಂದ ಬಂದಂತಹ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಜರುಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು.

ಎನ್‌ಎಸ್‌ಯುಐ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಎಂ.ಡಿ. ಶ್ರೀಕಾಂತ್ ಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸಿಂ ಡೆಂಕಿ, ತಾಲ್ಲೂಕು ಅಧ್ಯಕ್ಷ ಎಚ್. ಅಬುಸಾಲೇಹ, ವೆಂಕಟೇಶನಾಯ್ಕ್ ಅಜಾದ್, ಬಾಲಾಜಿ, ಮುಶ್ರಫ್‌ ಅಲಿ, ರೇವಣನಾಯ್ಕ, ಮಂಜು, ಸಮೀರ್ ಇತರರಿದ್ದರು.

error: Content is protected !!