ಹರಪನಹಳ್ಳಿ, ಮೇ 23 -ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ಕಣಿವಿಹಳ್ಳಿಯ ಕೆ.ಸಿ. ಸಾಗರ್ ಅವರಿಗೆ ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಸಮಾಜದ ಅಧ್ಯಕ್ಷ ಹೆಚ್.ಟಿ. ವನಜಾಕ್ಷಮ್ಮ, ಕಾರ್ಯದರ್ಶಿ ಲಕ್ಷ್ಮಿ ಚಂದ್ರಶೇಖರ್, ಉಪಾಧ್ಯಕ್ಷರಾದ ಟಿ. ಪದ್ಮಾವತಿ, ಸದಸ್ಯರಾದ ಯಡಿಹಳ್ಳಿ ಮಂಜುಳಾ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅದ್ಯಕ್ಷ ಕೆ. ಉಚ್ಚೆಂಗೆಪ್ಪ, ಉಪಾದ್ಯಕ್ಷ ಮಂಡಕ್ಕಿ ಸುರೇಶ, ಮುಖಂಡ ಎಚ್.ಟಿ. ಶಿವಯೋಗಿ ಸೇರಿದಂತೆ ಇತರರು ಇದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ವಾಲ್ಮೀಕಿ ಸಮಾಜ ಸನ್ಮಾನ
