ಹರಪನಹಳ್ಳಿ, ಮೇ 23 – ತಾಲ್ಲೂಕಿನ ಮೈದೂರು ಮತ್ತು ಚಿಗಟೇರಿ ಗ್ರಾಮದಲ್ಲಿ ರಾಷ್ಟ್ರೀಯ ಡೆಂಗ್ಯೂ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಜಿ. ಭುವನೇಶ್ವರಿ ನೇತೃತ್ವದಲ್ಲಿ ಜಾಗೃತಿ ಮೂಡಿಸಿದರು.
ಡೆಂಗ್ಯೂ ಜ್ವರ ಒಂದು ಮಾರಣಾನಂತಿಕವಾದ ಒಂದು ರೋಗ ಆದನ್ನು ನಾವುಗಳು ನಮ್ಮ ಮನೆಯ ಆವರಣದಲ್ಲಿ ಸ್ವಚ್ಚತೆಯಿಂದ ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಸಾರ್ವಜನಿಕರಲ್ಲಿ ತಿಳಿಸಿದರು.
ಡೆಂಗ್ಯೂ ಸೋಂಕುಳ್ಳ ಈಜಿಪ್ಟ್ ಈಡಿಸ್ ಸೊಳ್ಳೆಯಿಂದ ಬರುವ ರೋಗ. ಈ ಸೊಳ್ಳೆ ಹಗಲು ಹೊತ್ತಿನಲ್ಲೇ ಇರುತ್ತದೆ. ಮಳೆಗಾಲ ಪ್ರಾರಂಭವಾಗಿರು ವುದರಿಂದ ಈ ಸೊಳ್ಳೆಗಳ ಉತ್ಪತ್ತಿ ತೀವ್ರವಾಗಿರುತ್ತದೆ. ಇದರ ಲಕ್ಷಣಗಳೆಂದರೆ ತೀವ್ರವಾದ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಕೈ ನೋವು, ಕೀಲುನೋವು, ಮಾಂಸಖಂಡಗಳ ನೋವು ತೀವ್ರವಾಗಿ ಕಂಡುಬರುತ್ತದೆ. ಆದ್ದರಿಂದ ಸಾರ್ವಜನಿಕರು ಈ ರೋಗವನ್ನು ತಡೆಗಟ್ಟಲು ಸೊಳ್ಳೆಯ ನಿಯಂತ್ರಣ ಮುಖ್ಯವಾದುದು. ಈ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಮೊಟ್ಟೆಯನ್ನಿಡುವುದರಿಂದ ನೀರಿನ ಎಲ್ಲಾ ಪರಿಕರಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಿ ನೀರನ್ನು ಶೇಖರಿಸಬೇಕೆಂದರು.
ಈ ಕಾರ್ಯಕ್ರಮದಲ್ಲಿ ಚಿಗಟೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಂದ್ರೆಗೌಡ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ತ್ಯಾಗರಾಜ್ ಜ್ಯೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್, ಉಷಾ ಪಿ. ಹೆಚ್ ಸಿ. ಓ, ಕವಿತ್ರಾ ಪಿ. ಹೆಚ್ ಸಿ. ಓ. ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.