ಬುದ್ಧನ ತತ್ವಗಳಲ್ಲಿದೆ ಅನುಭವಾಮೃತ

ಬುದ್ಧನ ತತ್ವಗಳಲ್ಲಿದೆ ಅನುಭವಾಮೃತ

`ಜ್ಞಾನ ಜ್ಯೋತಿ’ ಕಾರ್ಯಕ್ರಮ ಉದ್ಘಾಟಿಸಿದ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ

ದಾವಣಗೆರೆ, ಮೇ 24- ಗೌತಮ ಬುದ್ಧನ ತತ್ವಗಳಲ್ಲಿ ಅನುಭವದ ಅಮೃತ ವಿದೆ. ಅದನ್ನು ಸವಿದು ಜೀವನವನ್ನು ಉತ್ತಮಗೊಳಿಸಿಕೊಳ್ಳು ವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಧ.ರಾ.ಮ ವಿಜ್ಞಾನ ಕಾಲೇಜು ವತಿಯಿಂದ ಬುದ್ಧ ಪೂರ್ಣಿಮೆ ಅಂಗವಾಗಿ ಎ.ಆರ್. ಜಿ. ಕಾಲೇಜಿನ ಎಸ್.ಎಸ್. ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ `ಜ್ಞಾನ ಜ್ಯೋತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧ ತನ್ನ ಶ್ರೀಮಂತಿಕೆ, ರಾಜ ವೈಢೂರ್ಯವನ್ನೆಲ್ಲಾ ತೊರೆದು ಬಡ ಜನರಿಗಾಗಿ ಜೀವನ ಮುಡಿಪಾಗಿಟ್ಟಿದ್ದರು. ಯಾವುದೂ ಶಾಶ್ವತವಲ್ಲ ಎಂಬುದನ್ನು ಅರಿತು ಶಾಂತಿ ನೆಮ್ಮದಿಯಿಂದ ಜೀವನ ನಡೆಸುವುದನ್ನು ಹೇಳಿಕೊಟ್ಟರು.  ಶಾಂತಿ ಒಂದೇ ಅವರ ಮೂಲ ಮಂತ್ರವಾಗಿತ್ತು. ಬುದ್ದನನ್ನು ಬೇರಾವ ಮಹಾನ್ ಪುರುಷರಿಗೂ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಚಿತೆಗೂ, ಚಿಂತೆಗೂ ಇರುವ ವ್ಯತ್ಯಾಸ ತಿಳಿದುಕೊಳ್ಳಬೇಕು. ಬುದ್ದನ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಅವರ ಸಂದೇಶದಂತೆ ಬದುಕಿ ಬಾಳಬೇಕು ಎಂದು ಮಂಜುನಾಥ್ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಎಂ.ಪಿ. ರೂಪಶ್ರೀ ಮಾತನಾಡಿ, ಕಿಸ್ತ ಪೂರ್ವ ಆರನೇ ಶತಮಾನದಲ್ಲಿ ಬೋಧಿಸಿದ ಬುದ್ಧನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ವೇದಿಕೆಯ ಮೇಲೆ ಸಾಂಸ್ಕೃತಿಕ ಸಮಿ ತಿಯ ಸಂಚಾಲಕ ಡಾ.ಮೊಹಮ್ಮದ್‌ ಇಮ ದಾದುಲ್ಲಾ ಹಾಗೂ ಹಿರಿಯ ಪ್ರಾಧ್ಯಾಪಕ ಡಾ. ಟಿ. ವಸಂತನಾಯ್ಕ್ ಉಪಸ್ಥಿತರಿದ್ದರು. ಚಂದನಾ ನಿರೂಪಿಸಿದರು. ವಿದ್ಯಾರ್ಥಿ ಎಂ.ಜಿ.ವಿನಯ ಕುಮಾರ್‌ ಸ್ವಾಗತಿಸಿದರು. ಎಂ.ಎಂ. ಪೂರ್ಣಿಮಾ ವಂದಿಸಿದರು. 

error: Content is protected !!