ಅಂಜಲಿ ಹತ್ಯೆಯ ಆರೋಪಿಯನ್ನು ಎನ್‍ಕೌಂಟರ್ ಮಾಡಬೇಕು

ಅಂಜಲಿ ಹತ್ಯೆಯ ಆರೋಪಿಯನ್ನು ಎನ್‍ಕೌಂಟರ್ ಮಾಡಬೇಕು

ಹೊನ್ನಾಳಿಯಲ್ಲಿ ಗಂಗಾಮತ ಸಮಾಜದಿಂದ ಪ್ರತಿಭಟನೆ

ಹೊನ್ನಾಳಿ, ಮೇ 23 –  ಹುಬ್ಬಳ್ಳಿಯ ಅಂಜಲಿ ಅಂಬಿಗರ ಹತ್ಯೆಯನ್ನು ಖಂಡಿಸಿ, ಗಂಗಾಮತ ಸಮಾಜ ಮತ್ತು ಸ್ವಾಮಿ ವಿವೇಕಾನಂದ ಭಗತ್‍ಸಿಂಗ್ ಚಾರಿಟೇಬಲ್ ಟ್ರ ಸ್ಟ್‍ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಸರ್ಕಾರದ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಗೆ ತಲುಪಿ ಗ್ರೇಡ್-2 ತಹಶೀಲ್ದಾರ್ ಸುರೇಶ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಂ.ಆರ್. ಮಹೇಶ್ ಮಾತನಾಡಿ, ರಾಜ್ಯದಲ್ಲಿ ಬಿಹಾರ ರಾಜ್ಯದಲ್ಲಿ ನಡೆದಿರುವ ಹಾಗೆ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆಗಳು ನಡೆಯುತ್ತಿದ್ದರೆ, ಕಾಂಗ್ರೆಸ್ ಸರ್ಕಾರ ಮಾತ್ರ ತಮ್ಮ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿ ಮೈಮರೆತಿದೆ ಎಂದು ಲೇವಡಿ ಮಾಡಿದರು.

ಈ ಕೂಡಲೇ ಹತ್ಯೆಗೈದ ಗಿರೀಶ್ ಸಾವಂತ ಎಂಬ ದುಷ್ಕರ್ಮಿಯನ್ನು ಎನ್‍ಕೌಂಟರ್ ಮಾಡಿ, ಅಂಜಲಿ ಹತ್ಯೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ಮಾಜಿ ತಾಲ್ಲೂಕು ಅಧ್ಯಕ್ಷ ಎ.ಬಿ. ಹನುಮಂತಪ್ಪ ಮಾತನಾಡಿ, ನೇಹಾ ಹಿರೇಮಠ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಭೀಕರ ಹತ್ಯೆಯಾಗಿರುವುದು ಖಂಡನೀಯ ಎಂದರು. ಗಿರೀಶ್ ಸಾವಂತ್ ಬಗ್ಗೆ ಈ ಹಿಂದೆಯೇ ಹಲವಾರು ದೂರುಗಳಿದ್ದರೂ, ಪೊಲೀಸ್ ಇಲಾಖೆ ಯಾವ ಕ್ರಮವನ್ನೂ ತೆಗೆದುಕೊಳ್ಳದೇ ಅಂಜಲಿ ಸಾವಿಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಗಂಗಾಮತ ಸಮಾಜದ ಅಧ್ಯಕ್ಷ ಹೆಚ್.ಕೆ. ವೆಂಕಟೇಶ್ ಮಾತನಾಡಿ, ನಮ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯವಾಗಿದ್ದು, ಯಾವುದೇ ಕಾರಣಕ್ಕೂ ಕೊಲೆಗಾರನನ್ನು ಬಿಡದೇ ಗಲ್ಲಿಗೇರಿಸಬೇಕು ಮತ್ತು ಅಂಜಲಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಾಜದ ಉಪಾಧ್ಯಕ್ಷ ಪತ್ರಕರ್ತ ಜೆ. ಹಳದಪ್ಪ, ಕಾರ್ಯದರ್ಶಿ ಲೋಕೇಶ್ ಚೀಲೂರು, ಸಹಕಾರ್ಯದರ್ಶಿ ನರಸಿಂಹ, ಖಜಾಂಚಿ ಪಿ.ಎಂ. ಮಲ್ಲಿಕಾರ್ಜುನ್, ಸಂಚಾಲಕ ಕೆ. ದೇವೇಂದ್ರಪ್ಪ, ಸದಸ್ಯ ರಾದ ಎಚ್. ಚನ್ನೇಶ್, ತಿಪ್ಪೇಶ್, ಶಿವಪ್ಪ, ರಾಘವೇಂದ್ರ, ಶೇಖರಪ್ಪ, ಶ್ರೀನಿವಾಸ್, ಗೋವಿಂದರಾಜು, ಚಂದ್ರಪ್ಪ, ಮಂಜಪ್ಪ, ಗುರುಮೂರ್ತಿ, ಮಲ್ಲಿಕಾರ್ಜುನ, ಹನುಮಂ ತಪ್ಪ, ವೆಂಕಟೇಶ್, ಮಂಜುನಾಥ್, ಬಸವರಾಜ್, ಶಂಕರ್, ಸುರೇಶ್, ರಾಜು ಮತ್ತಿತರರು ಉಪಸ್ಥಿತರಿದ್ದರು.

error: Content is protected !!