ಹರಿಹರ, ಮೇ 22- ನಗರದ ಜಿಬಿಎಂಎಸ್ ಶಾಲಾ ಕೊಠಡಿಯಲ್ಲಿ ತಾಲ್ಲೂ ಕಿನ ವಿವಿಧ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಈ ವೇಳೆ ಬಿಇಓ ಹನುಮಂತಪ್ಪ ಮತ್ತು ಶಿಕ್ಷಣ ಇಲಾಖೆಯ ನೋಟದರ್ ಮಾತ ನಾಡಿ, ತಾಲ್ಲೂಕಿನ 153 ಸರ್ಕಾರಿ ಪ್ರಾಥ ಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತಿದ್ದು, 1 ರಿಂದ 7 ನೇ ತರಗತಿಯ ಗಂಡು ಮಕ್ಕಳಿಗೆ ಶರ್ಟ್, ಚಡ್ಡಿ, 7 ರಿಂದ 10 ನೇ ತರಗತಿಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶರ್ಟ್, ಪ್ಯಾಂಟ್, 1 ರಿಂದ 5 ನೇ ತರಗತಿಯ ಮಹಿಳಾ ವಿದ್ಯಾರ್ಥಿನಿ ಯರಿಗೆ ಸ್ಕರ್ಟ್ ಮತ್ತು ಶರ್ಟ್, 6 ರಿಂದ 10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಚೂಡಿದಾರ ವಿತರಣೆ ಮಾಡಲಾಗುತ್ತಿದೆ.
ತಾಲ್ಲೂಕಿನಲ್ಲಿ 14 ಕ್ಲಸ್ಟರ್ ಗಳಿದ್ದು ಈಗಾಗಲೇ 4 ಕ್ಲಸ್ಟರ್ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲಾಗಿದೆ ಉಳಿದಂತೆ ಇನ್ನೂ 10 ಕ್ಲಸ್ಟರ್ ಶಾಲೆಯ ಶಿಕ್ಷಕರು ಪಡೆದುಕೊಂಡು ಹೋಗಲಿದ್ದಾರೆ ಎಂದು ಹೇಳಿದರು.