ದಾವಣಗೆರೆ, ಮೇ 22- ನಗರದ ಐಎಂಎ ಮಹಿಳಾ ವಿಭಾಗದಿಂದ ಐಎಂಎ ಹಾಲ್‌ನಲ್ಲಿ ಮೊನ್ನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿರುವ ಸೈಬರ್ ಕ್ರೈಂ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಐಎಂಎ ಮಹಿಳಾ ವಿಭಾಗದ ಅಧ್ಯಕ್ಷರಾದ ತ್ರಿವೇಣಿ ಮಲ್ಲೇಶ್, ಕಾರ್ಯದರ್ಶಿ ಶಿವಪ್ರಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೇಮಾ, ವಿದ್ಯಲತಾ, ಸುಮಂಗಲಾ, ಉಮಾ, ಅನೂಪ ಕಾರ್ಯಕ್ರಮ ನಡೆಸಿಕೊಟ್ಟರು.