ದಾವಣಗೆರೆ, ಮೇ 22- ನಗರದ ನಮನ ಅಕಾಡೆಮಿಯು ಶ್ರೀಲಂಕಾದ ಬೆಸಿಲಿಕ ಸ್ಫೋರ್ಟ್ಸ್ ಅಂಡ್ ಲೀಜರ್ ಅಕಾಡೆಮಿಯೊಂದಿಗೆ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸಿದೆ ಎಂದು ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿದ್ದು ದಿನಾಂಕ 24ರ ಶುಕ್ರವಾರ ಸಂಜೆ 6 ಗಂಟೆಗೆ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀಲಂಕಾದ 25 ಕಲಾವಿದರು ಹಾಗೂ ಸ್ಥಳೀಯ 78 ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
ಶಾಸಕ ಶಾಮನೂರು ಶಿವಶಂಕರಪ್ಪ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ, ಶ್ರೀಲಂಕಾದ ಬೆಸಿಲಿಕ ಸ್ಪೋ ರ್ಟ್ಸ್ ಅಂಡ್ ಲೀಜರ್ ಅಕಾಡೆಮಿ ಅಧ್ಯಕ್ಷ ರೋಷನ್ ಸಿಲ್ವಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದೇ ವೇಳೆ ದಾವಿವಿ ಗೌರವ ಡಾಕ್ಟರೇಟ್ ಪಡೆದ ಹೆಚ್.ಬಿ. ಮಂಜುನಾಥ್ ಅವರಿಗೆ `ನಮನ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ನಾಗಭೂಷಣ್, ಡಿ.ಕೆ. ಮಾಧವಿ, ಕೆ.ಎನ್. ಗೋಪಾಲಕೃಷ್ಣ, ಪಿ.ಸಿ. ರಾಮನಾಥ್, ಕಿರಣ್ ಇದ್ದರು.