ಹರಪನಹಳ್ಳಿ, ಮೇ 21 – ತಾಲ್ಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಗುಡುಗು – ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಮಳೆಗೆ ಹಳ್ಳ, ಗೋಕಟ್ಟೆಗಳಿಗೆ ನೀರು ಹರಿದಿದೆ.
ಧಾರಾಕಾರವಾಗಿ ಸುರಿದ ಮಳೆಗೆ ಅರಸೀಕೆರೆ ಕೋಲ ಶಾಂತೇಶ್ವರ ಮಠದ ಆವರಣದಲ್ಲಿ ನೀರು ಜಲಾವೃತಗೊಂಡಿತ್ತು. ಸಾರ್ವಜನಿಕರ ಸಹಕಾರದೊಂದಿಗೆ ಯಂತ್ರದ ಮೂಲಕ ನೀರು ಹೊರ ಹೋಗುವಂತೆ ಮಾಡಿದರು.
ಉತ್ತಮ ಮಳೆಯಿಂದಾಗಿ ಗ್ರಾಮದ ಹೃದಯ ಭಾಗದಲ್ಲಿರುವ ಚಿಕ್ಕಕೆರೆ ತುಂಬುವ ಹಂತಕ್ಕೆ ತಲುಪಿದೆ. ಐತಿಹಾಸಿಕ ದೊಡ್ಡ ಕೆರೆಗೆ ಒಳ ಹರಿವು ಹೆಚ್ಚಾಗಿದೆ.
ಗ್ರಾಮದ ಕೆರೆಗಳಿಗೆ ಮಳೆ ನೀರು ತಲುಪಿದ್ದು, ರೈತರ ಆಶಾಭಾವ ವೃದ್ಧಿಸಿದೆ.