ಧಾರಾಕಾರ ಮಳೆಗೆ ಹರಿಹರ ಕೂಲ್‌…!

ಧಾರಾಕಾರ ಮಳೆಗೆ ಹರಿಹರ ಕೂಲ್‌…!

ಹರಿಹರ, ಮೇ 21- ನಗರದಲ್ಲಿ ಮಂಗಳವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಸುರಿದ ಧಾರಾಕಾರ ಮಳೆಗೆ ನಗರ ವಾಸಿಗಳು ಸಂತಸದ ಜತೆಗೆ ಸಂಕಷ್ಟ ಎದುರಿಸು ವಂತಾಯಿತು.

ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ತುಸು ಬಿಸಿಲಿನಿಂದ ಕೂಡಿದ್ದ ವಾತವರಣ, ಸಂಜೆ 3.35ಕ್ಕೆ ಗುಡುಗು-ಸಿಡಿಲಿನಿಂದ ಆರ್ಭಟಿಸಿದ ಮಳೆಯಿಂದಾಗಿ ರಸ್ತೆ, ಚರಂಡಿಯಲ್ಲಿ ನೀರು ಉಕ್ಕಿ ಕೆಲವು ಮನೆಗಳಿಗೆ ನೀರು ನುಗ್ಗಿತು.

ಇದೇ ವೇಳೆ ದೊಡ್ಡ ಪ್ರಮಾಣದ ಸಿಡಿಲೊಂದು ನಗರ ವ್ಯಾಪ್ತಿಯ ಹೊರವಲಯದಲ್ಲಿ ಬಡಿದಿರಬಹುದು ಎನ್ನುವ ಸಂಶಯ ನಗರ ವಾಸಿಗಳಿಗೆ ಕಾಡಿತು.

ಇಲ್ಲಿನ ಬೆಂಕಿನಗರ, ಹಳೇ ಪಿ.ಬಿ. ರಸ್ತೆ, ಹೊಸ ಭರಂಪುರ, ಗಾಂಧಿ ನಗರ, ಬೆಂಕಿ ನಗರ, ತೆಗ್ಗಿನಕೇರಿ, ಕಾಳಿದಾಸ ನಗರ, ಗುತ್ತೂರು, ಹರ್ಲಾಪುರ ಬಡಾವಣೆ ಮತ್ತು ಕೈಲಾಸ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸಾರ್ವಜನಿಕರು ಮನೆಗೆ ನುಗ್ಗಿದ ನೀರು ಹೊರ ಹಾಕಲು ಹರಸಾಹಸ
ಮಾಡಿದರು.

ಸಂತೆಗೆ ಚಿಂತೆ : ದಿಢೀರನೆ ಸುರಿದ ಮಳೆಯಿಂದ ಮಂಗಳವಾರ ನಡೆಯುವ ತರಕಾರಿ ಸಂತೆಯ ವ್ಯಾಪಾರ ವಹಿವಾಟು ಕೆಲಹೊತ್ತು ಸ್ಥಗಿತಗೊಂಡಿತ್ತು ಮತ್ತು ಗ್ರಾಮಾಂತರ ಪ್ರದೇಶದ ಜನ ಪರದಾಡುವಂತಾಯಿತು.

ಕೆಲವು ಬಡಾವಣೆಗಳಲ್ಲಿ ಮರಗಳು ಬಿದ್ದಿದ್ದರಿಂದ ಹಲವೆಡೆ ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

ಮಳೆರಾಯನ ವಿರಾಮದ  ಬಳಿಕ ನಗರಸಭೆಯ ಪೌರಾಯುಕ್ತ ಐಗೂರು ಬಸವರಾಜ್ ಸೇರಿದಂತೆ ಇತರೆ ಸಿಬ್ಬಂದಿ ಹಲವು ಬಡಾವಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಹಲವು ಕಡೆಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಕಲ್ಪಿಸಿದರು.

error: Content is protected !!