ಪರಿಸರ ಸಮತೋಲನಕ್ಕೆ ಜೇನು ಸಂತತಿ ರಕ್ಷಿಸಿ : ಟಿ.ಎನ್. ದೇವರಾಜ್

ಪರಿಸರ ಸಮತೋಲನಕ್ಕೆ ಜೇನು ಸಂತತಿ ರಕ್ಷಿಸಿ : ಟಿ.ಎನ್. ದೇವರಾಜ್

ದಾವಣಗೆರೆ, ಮೇ 21- ಪರಿಸರ ಸಮತೋಲನದಿಂದ ಇರಬೇಕಾದರೆ, ಜೇನು ಹುಳುಗಳ ಸಂತತಿ ಕಾಪಾಡಬೇಕಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಎನ್. ದೇವರಾಜ್ ಹೇಳಿದರು.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಇವರ ಆಶ್ರಯದಲ್ಲಿ ನಡೆದ `ವಿಶ್ವ ಜೇನು ದಿನಾಚರಣೆ’ ಹಾಗೂ `ಕೈತೋಟ ತರಬೇತಿ’ಯಲ್ಲಿ ಅವರು ಮಾತನಾಡಿದರು.

ಜೇನು ಹುಳುಗಳ ಕಾರ್ಯದಿಂದ ಸಸ್ಯ ಸಂಕುಲದ ವೈವಿಧ್ಯತೆ ಮತ್ತು ಉತ್ಪಾದನೆ ಅವಲಂಬನೆಯಾಗಿದೆ. ಪ್ರಕೃತಿದತ್ತವಾದ ಕೃಷಿಗೆ ಜೇನು ಸಹಾಯಕವಾಗಿದ್ದು, ಪರಾಗಸ್ಪರ್ಶ ಕ್ರಿಯೆ ನಡೆಯಲು ಜೇನು ಅನುಕೂಲ ಮಾಡಲಿದೆ ಎಂದರು.

ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಮಾತನಾಡಿ, ಜಗಳೂರು ತಾಲ್ಲೂಕಿನ ಮಹಿಳೆಯರು ಮತ್ತು  ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದ್ದು, ಇದರ ನಿವಾರಣೆಗಾಗಿ ಸಾವಯವ ರೂಪದಲ್ಲಿ ಬೆಳೆದ ತರಕಾರಿಗಳನ್ನು ಆಹಾರದಲ್ಲಿ ಬಳಸಿದರೆ, ಉತ್ತಮ ಆರೋಗ್ಯ ಹೊಂದಬಹುದು ಎಂದು ಹೇಳಿದರು.

ಪ.ಪಂಗಡ ಉಪಯೋಜನೆಯಡಿ ಆಯ್ದ 40 ಕುಟುಂಬಗಳಿಗೆ ಪ್ರಸಕ್ತ ಸಾಲಿನಲ್ಲಿ ಪೌಷ್ಟಿಕ ಕೈತೋಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಧಾನ್ಯಗಳ ಸುರಕ್ಷತಾ ಕ್ರಮದ ಬಗ್ಗೆ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್ ವಿವರವಾದ ಮಾಹಿತಿ ನೀಡಿದರು.

ಕಲ್ಲೇದೇವರಪುರ ಗ್ರಾ.ಪಂ. ಅಧ್ಯಕ್ಷೆ ವಸಂತ ಕುಮಾರಿ, ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ ಮಾಸ್ತರ್ ಮತ್ತು 50ಕ್ಕೂ ಅಧಿಕ ರೈತರು ಮತ್ತು ರೈತ ಮಹಿಳೆಯರು ತರಬೇತಿಯ ಕಾರ್ಯಾಗಾರದಲ್ಲಿದ್ದರು.

error: Content is protected !!