ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ
ಹರಪನಹಳ್ಳಿ, ಮೇ 20- ಧಾರ್ಮಿಕ ಆಚರಣೆಗಳಿಂದ ಉತ್ತಮ ಸಂಸ್ಕಾರ, ಧರ್ಮ ಸಹಿಷ್ಣುತೆ, ಶಾಂತಿ ಮತ್ತು ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಂಚಿಕೇರಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಧಾರ್ಮಿಕ ಆಚರಣೆಯಲ್ಲಿ ರಾಜಕೀಯ ಸಲ್ಲದು, ಸಮುದಾಯಗಳ ಸಹಭಾಗಿತ್ವದಲ್ಲಿ ಉತ್ಸವ ನಡೆದರೆ ಹಬ್ಬದ ಮೆರಗು ಇಮ್ಮಡಿಗೊಳ್ಳಲಿದೆ ಎಂದು ತಿಳಿಸಿದರು.
ಕೆರೆ ಒತ್ತುವರಿ ನಡೆಯುತ್ತಿರುವ ಈ ದಿನಮಾನಗಳಲ್ಲಿ ವಿಶಾಲ ಭೂಮಿಯನ್ನು ದೇವಸ್ಥಾನಕ್ಕೆ ಮೀಸಲಿಟ್ಟ ಗ್ರಾಮಸ್ಥರನ್ನು ಶ್ಲ್ಯಾಘಿಸಿದ ಶ್ರೀಗಳು, ಪರಸ್ಪರ ಸಹಕಾರದಿಂದ ದೇವಸ್ಥಾನವು ಪವಿತ್ರ ಕ್ಷೇತ್ರವಾಗುವಂತೆ ಮಾಡಲು ಹೇಳಿದರು.
ಮುಖಂಡ ಬಿದ್ರಿ ಕೊಟ್ರೇಶ್ ಮಾತನಾಡಿ, ಸಮಾಜದ ಏಳಿಗೆಗೆ ಗುರುಗಳ ಕೃಪಾಶೀರ್ವಾದ ಮುಖ್ಯ. ಈ ನಿಟ್ಟಿನಲ್ಲಿ ಸಾಗಿದ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಯಶಸ್ಸು ಪಡೆದುಕೊಂಡಿದೆ ಎಂದರು.
ಈ ವೇಳೆ ಜಿ.ಎಂ. ತಿಪ್ಪೇಸ್ವಾಮಿ, ಜಿ.ಎಂ ಸಿದ್ದಲಿಂಗಯ್ಯ ಸ್ವಾಮಿ, ಕೆಂಚನಗೌಡ್ರು, ಶಾನುಭೋಗರ ಕೆಂಚಪ್ಪ, ಕೆ.ಎಸ್. ಜಾತಪ್ಪ, ಕಲ್ಲಳ್ಳಿ ಸಿದ್ದವೀರಪ್ಪ, ಮೋತಿ ಸಿದ್ದಪ್ಪ, ಕೆ.ಪಿ. ಬಸಣ್ಣ, ಗುಂಡಗತ್ತಿ ಬಸಣ್ಣ, ಕಲ್ಲಳ್ಳಿ ಕೊಟ್ರೇಶ್, ಬಾರಿಕರ್ ಮಂಜಪ್ಪ, ಅಣಜಿ ಸಂಗಜ್ಜ, ಸುನಿಲ್ ಕುಮಾರ್ ಬಿದರಿ, ಮೋತಿ ಅರುಣ್, ದಾನಮ್ಮನವರ ಕೊಟ್ರೇಶ್, ಕೆ. ಲಿಂಗರಾಜ್, ಮೋತಿ ವೀರಣ್ಣ, ತೇಜೇಶ್ವರ್, ತಿಮ್ಮಾಳ ದೇವೇಂದ್ರ, ಕೊಂಡಪ್ಪರ್ ಹನುಮಂತ, ಜೋಗಪ್ಪರ ಬಸಣ್ಣ, ಕೋಲ್ಕಾರ್ ಗೋಣೆಪ್ಪ, ಭೀಮಪ್ಳ ಅಂಜನಿ, ಮರಿಯಪ್ಳ ನಾಗರಾಜ, ಹಾಲಾಳ ಹನುಮಂತ ಮತ್ತು ಗ್ರಾಮಸ್ಥರಿದ್ದರು.